ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್ ನಾಶಕ್ಕೆ ಅವೈಜ್ಞಾನಿಕ ಕ್ರಮ; ತಪ್ಪಿದ ಅನಾಹುತ

Last Updated 19 ಜುಲೈ 2021, 12:57 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ದೇಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರಗಾಪುರ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮೇಲ್ಮಟ್ಟದ ಟ್ಯಾಂಕ್ ನಾಶಪಡಿಸಲು ಜಾಗೃತೆ ವಹಿಸದ ಪರಿಣಾಮ ಪಕ್ಕದ ಕಟ್ಟಡದ ಮೇಲೆ ಅದು ಉರುಳಿ ಬಿದ್ದು ಎರಡು ಮನೆ ಜಖಂಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಗುರುಸಿದ್ದಯ್ಯ ಶಹಾಪುರಮಠ ಹಾಗೂ ಮಹಾದೇವಿ ಶಹಾಪುರಮಠ ಅವರ ಮನೆಗಳಿಗೆ ಹಾನಿ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

‘ಶಿಥಿಲಗೊಂಡ ಮೇಲ್ಮಟ್ಟದ ಟ್ಯಾಂಕ್ ಗೆ ಹಗ್ಗ ಕಟ್ಟಿ ಜನರಿಂದ ಎಳೆಸಲಾಯಿತು. ಹೀಗಾಗಿ ಈ ಅನಾಹುತ ನಡೆಯಿತು’ ಎಂದು ಮನೆಯವರು ದೂರಿದರು. ‘ಕಟ್ಟಡಕ್ಕೆ ಹಾನಿಯಾಗಿದೆ.

ಪರಿಹಾರ ವಿತರಿಸಲಾಗುವುದು:‘ನೀರಿನ ಟ್ಯಾಂಕ್ ಬಹಳ ಶಿಥಿಲಗೊಂಡಿತ್ತು. ಅದನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಆಕಸ್ಮಿಕ ಘಟನೆ ನಡೆದುಹೋಗಿದೆ. ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ನೀಡಲಾಗುವುದು’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕುಸುಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT