ಗುರುವಾರ , ಅಕ್ಟೋಬರ್ 22, 2020
28 °C

ಅಧ್ಯಾತ್ಮ ಅಳವಡಿಸಿಕೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ

ಎನ್ನ ಬಿಡು, ತನ್ನ ಬಿಡು ಎಂಬುದು ಕಾಯ ವಿಕಾರ

ಎನ್ನ ಬಿಡು, ತನ್ನ ಬಿಡು ಎಂಬುದು ಮನೋ ವಿಕಾರ

ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ

ಮನ ನಿಮ್ಮನೈದುಗೆ, ಕೂಡಲಸಂಗಮ ದೇವಾ

ಮಾನವನು ತನ್ನ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಆಧ್ಯಾತ್ಮವು ಅಂತರಂಗವನ್ನು ಶುದ್ಧಗೊಳಿಸುವುದರೊಂದಿಗೆ,  ಬಹಿರಂಗದ ದುಃಖವನ್ನು ದೂರ ಮಾಡುತ್ತದೆ. ಅಂತರಂಗ ಶುದ್ಧವಾಗಿರಬೇಕೆಂದರೆ ಮನಸ್ಸು ಒಳ್ಳೆಯದನ್ನು ಆಲೋಚಿಸುತ್ತಿರಬೇಕು. ಈ ನಿಟ್ಟಿನಲ್ಲಿ ಬಸವಣ್ಣ ಅವರು ತಮ್ಮ ವಚನದ ಮೂಲಕ ಮಾನವನನ್ನು ಮೊಲಕ್ಕೆ ಹೋಲಿಸಿದ್ದಾರೆ. ಒಂಬತ್ತು ನಾಯಿಗಳು ಮೊಲಕ್ಕೆ ಬೆನ್ನು ಹತ್ತುವಂತೆ ಮಾನವನಿಗೂ ಪಂಚೇಂದ್ರಿಯಗಳು ಹಾಗೂ ಅಂತಃಕರಣ ಚತುಷ್ಟಯಗಳೆಂಬ ಒಂಬತ್ತು ನಾಯಿಗಳು ಬೆನ್ನು ಹತ್ತಿವೆ. ಪಂಚೇಂದ್ರಿಯಗಳ ಕುರಿತು ಎಲ್ಲರಿಗೂ ತಿಳಿದಿದೆ.  ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಇವು ಅಂತಃಕರಣ ಚತುಷ್ಟಯಗಳು. ಪಂಚೇಂದ್ರಿಯಗಳು ದೇಹಕ್ಕೆ ಸಂಬಂಧಪಟ್ಟರೆ, ಚತುಷ್ಟಯಗಳು ಮನಸ್ಸಿಗೆ ಸಂಬಂಧಿಸಿದವಾಗಿವೆ. ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಭಗವಂತನ ಆರಾಧನೆ ಮಾಡುವುದು ಅವಶ್ಯ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು