‘ಕನ್ನಡ ಸಂಘ ಮತ್ತು ಕನ್ನಡ ಬಳಗಗಳ ಮೂಲಕ ಕನ್ನಡ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ಕ್ರಮ ವಹಿಸಬೇಕು. ವೈದ್ಯರು ರಚಿಸಿದ ಕಥೆಗಳನ್ನು ಆಹ್ವಾನಿಸಿ, ಪ್ರಾತಿನಿಧಿಕ ಕಥಾ ಸಂಕಲನ ಪ್ರಕಟಿಸಬೇಕು. ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿ ಪ್ರಕಟಿಸಲು ಪ್ರಸಾರಾಂಗ ಸ್ಥಾಪಿಸಬೇಕು ಮತ್ತು ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ಪ್ರಸಾರಾಂಗಗಳ ಸಹಕಾರ ಪಡೆಯಬೇಕು. ವೈದ್ಯಕೀಯ ಗ್ರಂಥಾಲಯಗಳಲ್ಲಿ ಕನ್ನಡ ವೈದ್ಯಕೀಯ ಸಾಹಿತ್ಯವೂ ಲಭಿಸಲು ಕ್ರಮ ವಹಿಸಬೇಕು. ಪಠ್ಯ ಪುಸ್ತಕಗಳಲ್ಲಿ ಆರೋಗ್ಯ ಸಾಹಿತ್ಯಕ್ಕೆ ಒತ್ತು ನೀಡಬೇಕು. ಕನ್ನಡದ ಎಲ್ಲ ವೈದ್ಯ ಬರಹಗಾರರ ಮಾಹಿತಿ ದಾಖಲಿಸುವ ಕೆಲಸವಾಗಬೇಕು’ ಎಂಬ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.