ಮೂಡಲಗಿ: ಮೂಡಲಗಿ ಪುರಸಭೆ ಹಾಗೂ ಅರಭಾವಿ ಕ್ಷೇತ್ರದ ಸ್ವೀಪ್ ಸಮಿತಿ ಸಹಯೋಗದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬುಧವಾರ ಮತದಾರರ ಜಾಗೃತಿ ಜಾಥಾ ನಡೆಯಿತು.
ಸ್ವೀಪ್ ಸಮಿತಿ ಅಧ್ಯಕ್ಷ ನವೀನಪ್ರಸಾದ ಕಟ್ಟಿಮನಿ ಜಾಥಾಗೆ ಚಾಲನೆ ನೀಡಿ, ‘ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ಸಿಗೆ ಕಡ್ಡಾಯವಾಗಿ ಮತದಾನವನ್ನು ಮಾಡಬೇಕು. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಮತದಾನವನ್ನು ಮಾಡುವ ಹಕ್ಕು ನೀಡಿದೆ’ ಎಂದರು.
ಪುರಸಭೆಯ ಕಾರ್ಯಾಲಯದಿಂದ ಪ್ರಾರಂಭವಾದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಕಲ್ಮೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು.
ಪ್ರಭಾರ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಂ. ಮುಗಳಖೋಡ, ಸಿಪಿಐ ಅಬ್ದುಲ್ ವಾಜೀದ ಪಟೇಲ, ಜಿ.ವಿ. ನಾಗರಾಜ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.