ವಿಟಿಯು ಅಂತರವಲಯ ಮಟ್ಟದ ಕಬಡ್ಡಿ: ನ್ಯೂ ಹಾರಿಜೋನ್ ಕಾಲೇಜು ಪ್ರಥಮ

ಬುಧವಾರ, ಮೇ 22, 2019
24 °C

ವಿಟಿಯು ಅಂತರವಲಯ ಮಟ್ಟದ ಕಬಡ್ಡಿ: ನ್ಯೂ ಹಾರಿಜೋನ್ ಕಾಲೇಜು ಪ್ರಥಮ

Published:
Updated:
Prajavani

ಬೆಳಗಾವಿ: ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜು ತಂಡದವರು ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜು ವತಿಯಿಂದ ಆಯೋಜಿಸಿದ್ದ ವಿಟಿಯು ಅಂತರವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಪಡೆದುಕೊಂಡರು.

ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಹಾರಿಜೋನ್ ಕಾಲೇಜು ತಂಡದವರು ಮೈಸೂರಿನ ಎಂಐಜಿ ಕಾಲೇಜು ತಂಡದವರನ್ನು ಸೋಲಿಸಿದರು. ಮಂಗಳೂರಿನ ಎಸ್ಐಟಿ ಕಾಲೇಜು ಮತ್ತು ಹಾಸನದ ಎಂಸಿಇ ಕಾಲೇಜು ತಂಡದವರು ಕ್ರಮವಾಗಿ 3ನೇ ಹಾಗೂ 4ನೇ ಬಹುಮಾನ ಗಳಿಸಿದರು.

ಅಂಗಡಿ ತಾಂತ್ರಿಕ ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ ಹಾಗೂ ಪ್ರಾಚಾರ್ಯ ಸಂಜಯ ಪೂಜಾರಿ ಬಹುಮಾನ ವಿತರಿಸಿದರು. ಜಿಮ್ಖಾನ ಅಧ್ಯಕ್ಷ ಪ್ರೊ.ಕಿರಣ ಪೋತದಾರ, ಪ್ರೊ.ಅಮರ ಬ್ಯಾಕೋಡಿ, ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಂಗನಾಥ, ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭೈರಪ್ಪ, ಬಿಐಟಿಯ ದೈಹಿಕ ಶಿಕ್ಷಣ ನಿರ್ದೇಶಕ ದಾಸೇಗೌಡ, ಆರ್‌ಸಿಯು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎನ್. ಪಾಟೀಲ, ಟೂರ್ನಿಯ ಸಂಚಾಲಕ ವಿಶಾಂತ ದಮೋಣೆ, ಎಂ.ಎನ್. ಖೋತ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !