ಸ್ಕೇಟಿಂಗ್ನಲ್ಲಿ ವಿಶ್ವ ದಾಖಲೆ

ಚಿಕ್ಕೋಡಿ: ಪಟ್ಟಣದ ಸಿಎಲ್ಇ ಸಂಸ್ಥೆಯ ಕೆ.ಕೆ. ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ನಂದಿನಿ ನಾಗರಾಜ್ ಕೋಲೆ ನಿರಂತರ 72 ಗಂಟೆಗಳ ಕಾಲ ಸ್ಕೇಟಿಂಗ್ ಸಾಧನೆಗೈದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಬೆಳಗಾವಿಯಲ್ಲಿ ಶಿವಗಂಗಾ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಶಿವಗಂಗಾ ಅಂತರರಾಷ್ಟ್ರೀಯ ರೋಲರ್ ಸ್ಕೇಟಿಂಗ್ ರಿಂಗ್ನಲ್ಲಿ ನಿರಂತರ 72 ಗಂಟೆಗಳ ಕಾಲ ಮಲ್ಟಿ ಆಕ್ಟಿವಿಟೀಸ್ ಸ್ಕೇಟಿಂಗ್ನ 8,232 ಸುತ್ತುಗಳಲ್ಲಿ 1646 ಕಿ.ಮೀ. ಅಂತರವನ್ನು ಪೂರ್ಣಗೊಳಿಸಿರುವ ನಂದಿನಿ, ಇಂಡಿಯಾ ಬುಕ್, ಏಷಿಯಾ ಬುಕ್, ಬೆಸ್ಟ್ ಇಂಡಿಯಾ ಬುಕ್, ಗ್ಲೋಬ್ ರೆಕಾರ್ಡ್, ಚಿಲ್ಡ್ರನ್ ಬುಕ್, ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಗಳಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾಳೆ.
ನಂದಿನಿಗೆ ಇಚಲಕರಂಜಿಯ ಸವಿತಾ ಖೋತ ಮತ್ತು ಸುನೀಲ ಖೋತ ಮಾರ್ಗದರ್ಶನ ನೀಡುತ್ತಾರೆ. ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿರುವ ವಿನ್ನರ್ಸ್ ಸ್ಕೇಟಿಂಗ್ ಸ್ಕೂಲ್ನಲ್ಲಿ ಅಭ್ಯಾಸ ಮಾಡುತ್ತಾಳೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.