ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಗ್ಗಟ್ಟಾಗಿ ಚುನಾವಣೆ ಎದುರಿಸಿ’

ರಾಯಬಾಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ, ಜನವೇದನೆ ಕಾರ್ಯಕ್ರಮ
Last Updated 6 ಮಾರ್ಚ್ 2017, 12:58 IST
ಅಕ್ಷರ ಗಾತ್ರ

ರಾಯಬಾಗ: ಕಾಂಗ್ರೆಸ್ ಪಕ್ಷಕ್ಕೆ ಯಾರೂ ವಿರೋಧಿಗಳಿಲ್ಲ. ಆದರೆ ಕಾಂಗ್ರೆಸ್‌ಗೆ ಕಾಂಗ್ರೆಸ್ ಪಕ್ಷವೇ ವೈರಿಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಎಲ್ಲರೂ ಒಗ್ಗಟ್ಟಾಗಿ  ವೈಮನಸ್ಸು ಬಿಟ್ಟು ಒಂದಾಗಿ ಬರುವ ಚುನಾವಣೆಯನ್ನು ಎದುರಿಸ ಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಎಸ್‌.ಸಿ., ಎಸ್‌.ಟಿ ಘಟಕದ ವೀಕ್ಷಕ ಅಶೋಕ ಕುಮಾರ ಅಸೋದೆ ಹೇಳಿದರು.

ಪಟ್ಟಣದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ  ಭಾನುವಾರ ಹಮ್ಮಿ ಕೊಂಡಿದ್ದ ಪ್ರತಿಭಟನೆ ಹಾಗೂ ಜನವೇದನೆ ಸಭೆಯಲ್ಲಿ ಅವರು ಮಾತನಾಡಿದರು.

ಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಕ್ಕರು  ಸಹ ಯಾರೂ ವಿರೋಧ ಮಾಡದೆ ಅಂತವರನ್ನು ಆಯ್ಕೆ ಮಾಡ ಬೇಕಲ್ಲದೆ, ಸಂಘಟನೆಯು ಕಾಂಗ್ರೆಸ್‌ನ ಅವಿಭಾಜ್ಯ ಅಂಗ ಸಂಸ್ಥೆಯಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ಸಿನ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಲ್ಲದೆ ರಾಜ್ಯದಲ್ಲಿನ ಸಾಧನೆಗಳನ್ನು ಸಹ ವಿವರಿಸಬೇಕು ಎಂದರು.

ಕುಡಚಿ ಬ್ಲಾಕ್ ವೀಕ್ಷಕ ಸುರೇಶ ತಳವಾರ ಮಾತನಾಡಿ, ಪ್ರಧಾನಿ ಮೋದಿ ಯವರ ನೋಟ್ ಬ್ಯಾನ್ ಬಗ್ಗೆ ವಿವರಿಸಿ ಜನರಿಗಾದ ತೊಂದರೆಗಳನ್ನು ವಿವರಿಸಿದರು.

ಮಲ್ಲೇಶ ಚೌಗಲೆ ಪಕ್ಷದ ಸಂಘಟನೆ ಬಗ್ಗೆ ಮಾತನಾಡಿದರು. ಯುವ ಮುಖಂಡ ಧೂಳಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿವಿಧ ಭಾಗ್ಯಗಳ ಬಗ್ಗೆ ವಿವರಿಸಿ, ತಳ ಸಮುದಾಯದ ಅಭ್ಯುದಯ, ಶೂನ್ಯ ಬಡ್ಡಿದರ, ಅಲ್ಪ ಸಂಖ್ಯಾತರ ಕಲ್ಯಾಣ, ಗ್ರಾಮ ವಿಕಾಸ ಬಾಪೂಜಿ ಸೇವಾ ಕೇಂದ್ರಗಳ ಬಗ್ಗೆ ತಿಳಿಸಿ ಸರ್ಕಾರದ ಸಾಧನೆಗಳನ್ನು ತಿಳಿಸಿ ರಾಜೀವ್ ಗಾಂಧಿ ಪಂಚಾಯ್ತಿ ರಾಜ್ ಸಂಘಟನೆ ಬಗ್ಗೆ ಜಾಗೃತಿ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿ ನಮ್ಮ ನಮ್ಮಲ್ಲಿ ಅಧಿಕಾರಕ್ಕೆ ಕಚ್ಚಾಡದೆ ಒಗ್ಗಟ್ಟಿನಿಂದ ಪಕ್ಷ ಸಂಘಟಿಸುವಂತೆ ಹೇಳಿ, ತಾಲ್ಲೂಕಿನಲ್ಲಿನ ಬರಗಾಲದ ಶಾಶ್ವತ ಪರಿಹಾರಕ್ಕಾಗಿ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ಬೆಂಡವಾಡ ಸೇರಿದಂತೆ 13 ಗ್ರಾಮಗಳ 17 ಕೆರೆಗಳನ್ನು ತುಂಬಲು ₹64 ಕೋಟಿ ಅನುದಾನದ ಪ್ರಸ್ತಾವ ಸಲ್ಲಿಸಿದ್ದು ಶೀಘ್ರ ಮಂಜೂರು ಮಾಡುವ ಭರವಸೆಯನ್ನು ಸಮಾಜ ಕಲ್ಯಾಣ  ಸಚಿವ ಆಂಜನೇಯ ಭರವಸೆ ನೀಡಿದ್ದಾರೆ ಎಂದರು.

ರಾಜು ಶಿರಗಾವಿ, ಅಪ್ಪಾಸಾಬ ಕುಲಗುಡೆ, ಗಣೇಶ ಮೊಹಿತೆ, ಅಣ್ಣಾಸಾಬ ಹಂಚಿನ ಮನಿ,ಅಪ್ಪಾಸಾಬ ನರಗಟ್ಟಿ, ಸತ್ತಾರ ಮುಲ್ಲಾ, ದಿಲಿಪ ಜಮಾದಾರ, ರಮೇಶ ಬೆಳ ಗಲಿ, ಸುಕುಮಾರ ಕಿರನಗಿ, ವಿಲಾಸ ಹೆರವಾಡೆ,ಸಾಗರ ಜಂಡೆನ್ನವರ, ಶಿವಾಜಿ ಸೌಂದಲಗಿ, ಅರ್ಜುನ ಬಂಡಗಾರ, ಜಾಕಿರ ತರಡೆ, ಸಿದ್ರಾಮ ಪೂಜಾರಿ ಹಾಗೂ  ರಾಯಬಾಗ ಮತ್ತು ಕುಡಚಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಡಿ.ಎಸ್.ನಾಯಿಕ ಸ್ವಾಗತಿಸಿದರು. ಬಿ.ಎನ್.ಬಂಡಗರ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT