ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Last Updated 9 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಬೆಳಗಾವಿ: ದೆಹಲಿಯ ಹೈಕೋರ್ಟ್ ಬಳಿ ಬುಧವಾರ ನಡೆದ ಬಾಂಬ್ ಸ್ಫೋಟ ಖಂಡಿಸಿ ಬೆಳಗಾವಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು.

ಈ ಕುರಿತು ಪ್ರಧಾನಮಂತ್ರಿ ಸಲ್ಲಿಸಿದ ಮನವಿಯಲ್ಲಿ, ದೇಶದ ರಾಜಧಾನಿಯಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ಬಾಂಬ್ ಸ್ಫೋಟಕ್ಕೆ ಕಾರಣರಾದ ಆರೋಪಿ ಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣ ವರ, ಉಪಾಧ್ಯಕ್ಷೆ ನೀತಾ ಪೋತದಾರ ಮತ್ತಿತ ರರು ಪಾಲ್ಗೊಂಡಿದ್ದರು.

ಬಂದೋಬಸ್ತ್: ದೆಹಲಿ ಬಾಂಬ್‌ಸ್ಫೋಟ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ವಾರಸುದಾರರು ಇಲ್ಲದ ಹಾಗೂ ಅನುಮಾನಾಸ್ಪದ ವಸ್ತುಗಳನ್ನು ಕಂಡರೆ ಮುಟ್ಟಬಾರದು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪೂರ್ವಾಪರ ತಿಳಿದುಕೊಳ್ಳದೇ ಮನೆ ಬಾಡಿಗೆ ನೀಡಬಾರದು. ವಸತಿ ಗೃಹಗಳಲ್ಲಿ ಗ್ರಾಹಕರ ಗುರುತಿನ ಚೀಟಿ ಪರಿಶೀಲಿಸದ ನಂತರವೇ ಬಾಡಿಗೆ ನೀಡಬೇಕು.

`ಕಾರು, ಮೋಟಾರು ಸೈಕಲ್ ಮಾರಾಟ ಮಾಡುವ ಮುನ್ನ ಕೊಂಡುಕೊಳ್ಳುವವರ ವಿವರ ತಿಳಿದುಕೊಳ್ಳ ಬೇಕು. ಅನುಮಾನಾಸ್ಪದವಾಗಿ ತಿರುಗುವ ವ್ಯಕ್ತಿಗಳು ಕಂಡು ಬಂದರೆ ಜಿಲ್ಲಾ ಪೋಲಿಸ್ ನಿಯಂತ್ರಣ ಕೊಠಡಿ ದೂ.100ಕ್ಕೆ ಮಾಹಿತಿ ನೀಡಬೇಕು~ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಾಂಸ್ಕೃತಿಕ ಕಲಾ ಮೇಳ ನಾಳೆ
ಬೆಳಗಾವಿ:
ಇಲ್ಲಿನ ನೆಹರೂ ಯುವ ಕೇಂದ್ರ ಹಾಗೂ ರಾಯಬಾಗ ತಾಲ್ಲೂಕಿನ ಹಾಲಶಿರಗೂರದ ಶ್ರೀ ಲಕ್ಷ್ಮೀ ದೇವಿ ಡೊಳ್ಳು ಹಾಡಿನ ಕಲಾವಿದರ ಸಂಘದ ಆಶ್ರಯ ದಲ್ಲಿ ರಾಯಬಾಗ ಮತ್ತು ಅಥಣಿ ಉಪವಿಭಾಗ ಮಟ್ಟದ ಯುವ ಸಾಂಸ್ಕೃತಿಕ ಕಲಾ ಮೇಳವು ಇದೇ 10ರಂದು ಮಧ್ಯಾಹ್ನ 3.30ಕ್ಕೆ ಹಾಲಶಿರಗೂರ ಶಾಲಾ ಆವರಣದಲ್ಲಿ ನಡೆಯಲಿದೆ.

ಕಲ್ಮೇಶ್ವರ ಮಠದ ವಿರೂಪಾಕ್ಷ ಸ್ವಾಮೀಜಿ ಹಾಗೂ ಸಿದ್ಧಾಶ್ರಮ ಮಠದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಜಿ.ಪಂ. ಯೋಜನಾ ಮತ್ತು ಹಣಕಾಸು ಸ್ಥಾಯಿ ಸಮಿತಿ ಸದಸ್ಯೆ ಕೆಂಚವ್ವ ಹಾಲಪ್ಪ ಘಾಳಿ ಉದ್ಘಾ ಟಿಸಲಿದ್ದಾರೆ.
ಶಿರಗೂರ ಗ್ರಾ.ಪಂ. ಅಧ್ಯಕ್ಷ ಸರೋಜಿನಿ ಮಲ್ಲಪ್ಪ ಸವದತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT