ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲರ ಏಳ್ಗೆಗಾಗಿ ಶ್ರಮಿಸಿ

Last Updated 1 ಮೇ 2012, 7:50 IST
ಅಕ್ಷರ ಗಾತ್ರ

ಮೂಡಲಗಿ: ಸಮಾಜದಲ್ಲಿಯ ದುರ್ಬಲ ಜನರನ್ನು ಬೆಳೆಸುವ ಮೂಲಕ ಸಮಾಜವನ್ನು ಸದೃಢಗೊಳಿಸುವದು ಇಂದು ಅನಿವಾರ್ಯವಾಗಿದೆ~ ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇಲ್ಲಿಯ ಲಕ್ಷ್ಮಿ ನಗರದ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಶಾಂತಾನಂದ ಸ್ವಾಮಿಗಳ ಪೀಠಾರೋಹಣ ಸಮಾರಂಭದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ದುರ್ಬಲ ಜನರು ತಮ್ಮಷ್ಟಕ್ಕೆ ತಾವೇ ಬೆಳೆಯುವುದು ಕಷ್ಟಕರ ಸಂಗತಿಯಾಗಿದೆ.  ದುರ್ಬಲ ಮತ್ತು ಹಿಂದುಳಿದ ಸಮಾಜದವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಅಂಥ ಸಮಾಜದ ಮುಖಂಡರು ಜಾಗೃತರಾಗಬೇಕು ಎಂದರು.

ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮಾಜಗಳ ಉನ್ನತಿಗಾಗಿ ಧಾರ್ಮಿಕ ಚಿಂತನೆ, ಕಾರ್ಯಗಳು ಅವಶ್ಯವಿದ್ದು, ಭಾರತೀಯ ದೈವಭಕ್ತಿಯ ಉಜ್ವಲ ಪರಂಪರೆಯನ್ನು ಮುಂದುವರಿಸಿ ಕೊಂಡು ಹೋಗುವದು ಇಂದು ಅವಶ್ಯವಿದೆ ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ಬೆಳವಣಿಗೆಗೆ ತಾವು ಸಹಾಯ, ಸಹಕಾರವನ್ನು ನೀಡುವದಾಗಿ ತಿಳಿಸಿದ ಅವರು, ಮನವಿಯಲ್ಲಿ ತಿಳಿಸಿದ ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸುವ ಭರವಸೆ ನೀಡಿದರು.

ಅರೆಮಾದನಹಳ್ಳಿಯ ಸುಜ್ಞಾನಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾಪಕ ಶಿವಸುಜ್ಞಾನ ತೀರ್ಥ ಸ್ವಾಮೀಜಿ , ಕಟಪಾಡಿಯ ಆನೆಗುಂದಿ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಚಿಕ್ಕಬಳ್ಳಾಪುರದ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ವತಿ ಸ್ವಾಮಿಗಳು, ಶಾಂತಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿರಸಂಗಿಯ ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ. ಪಿ.ಬಿ. ಬಡಿಗೇರ ಮಾತನಾಡಿ ವಿಶ್ವಕರ್ಮ ಸಮಾಜದ ಜನರು ಒಗ್ಗಟ್ಟು ಮತ್ತು ಸಂಘಟನೆಗೆ ಜಾಗೃತರಾಗಬೇಕು ಎಂದರು.

ಆರ್.ಪಿ .ಬಡಗನ್ನವರ ಪುರಸಭೆ ಅಧ್ಯಕ್ಷೆ ನಾಗರತ್ನಾ ಯಮಕನಮರಡಿ, ಉಪಾಧ್ಯಕ್ಷ ಅಜೀಜ ಡಾಂಗೆ, ಎಸ್.ಜಿ. ಗೋಡಿಗೌಡರ, ಡಿ.ಬಿ. ಪಾಟೀಲ, ಬಿಇಒ ಅಜೀತ ಮನ್ನಿಕೇರಿ, ಡಾ. ಎಂ.ಎನ್. ಮುಗಳಖೋಡ ಭಾಗವಹಿಸಿದ್ದರು.

ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಬಡಿಗೇರ, ದೇವೇಂದ್ರಪ್ಪ ಪತ್ತಾರ, ಮೌನೇಶ ಪತ್ತಾರ, ಸುಧಾಕರ ಪತ್ತಾರ, ಮಡಿವಾಳಪ್ಪ ಬಡಿಗೇರ, ಶ್ರೀಕಾಂತ ಪತ್ತಾರ, ರಾಜು ಬಡಿಗೇರ, ಅಶೋಕ ಬಡಿಗೇರ, ರವಿ ಪತ್ತಾರ, ರಾಜು ಪತ್ತಾರ, ಭಗವಂತ ಪತ್ತಾರ, ಚಿದಾನಂದ ಪತ್ತಾರ ಮತ್ತಿತರು ಭಾಗವಹಿಸಿದ್ದರು.

ಗಜಾನನ ಪತ್ತಾರ ಸ್ವಾಗತಿದರು, ಸುಭಾಸ ಪತ್ತಾರ, ಶಿಲ್ಪಾ ಪತ್ತಾರ ನಿರೂಪಿಸಿದರು,  ರಘು ಪತ್ತಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT