ರಾಮದುರ್ಗ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಲು ಇಂತಹ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳಗಳು ಉಪಯುಕ್ತವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಹಾದೇವಿ ರೊಟ್ಟಿ ಹೇಳಿದರು.

ನರಸಾಪುರ ಕ್ಲಸ್ಟರ್ ಮಟ್ಟದ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳವನ್ನು ಚಿಲಮೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಇಂಥ ಮೇಳಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿವೆ ಎಂದರು.

ಪುಸ್ತಕ ಜ್ಞಾನದ ಜೊತೆಗೆ ಮೇಳಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉಪಯುಕ್ತ ಆಗಲಿವೆ. ಪ್ರಾಯೋಗಿಕ ಅನುಭವಕ್ಕೆ ಮೇಳಗಳು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಐಇಆರ್ಟಿ ಆರ್.ಎಸ್. ಸಂಕಣ್ಣವರ ಮತ್ತು ಸಿಆರ್ಪಿ ಆರ್.ಪಿ. ಬೆಟಗೇರಿ ಅಭಿಪ್ರಾಯಪಟ್ಟರು.

ಮುಖ್ಯ ಶಿಕ್ಷಕಿ ಆರ್.ಎಫ್. ಸಣ್ಣಪ್ಪನವರ, ಟಿ.ಪಿ. ವಂಡಕರ, ಎಂ.ಎಂ. ಪಮ್ಮಾರ, ಜಿ.ಎಸ್. ಯಾದವಾಡ ಉಪಸ್ಥಿತರಿದ್ದರು. ನರಸಾಪುರ ಸಿಆರ್ಪಿ ಎಲ್.ಆರ್. ಪಮ್ಮಾರ ಸ್ವಾಗತಿಸಿದರು. ಎಂ.ಎಸ್. ಗಡೇಕಾರ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ. ಶಿವಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.