ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣನ ವೀರ ಜ್ಯೋತಿಗೆ ಚಾಲನೆ

ಖಾನಾಪುರ ಸಮೀಪದ ನಂದಗಡದಲ್ಲಿ ಯಾತ್ರೆಗೆ ಶಾಸಕ ಅರವಿಂದ ಪಾಟೀಲರಿಂದ ಚಾಲನೆ
Last Updated 24 ಜನವರಿ 2017, 7:17 IST
ಅಕ್ಷರ ಗಾತ್ರ

ಖಾನಾಪುರ: ಇದೇ 23ರಿಂದ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೀರಜ್ಯೋತಿಯಾತ್ರೆಗೆ ತಾಲ್ಲೂಕಿನ ನಂದಗಡ ಗ್ರಾಮದ ರಾಯಣ್ಣನ ಸಮಾಧಿಯಿಂದ ಸೋಮವಾರ ಚಾಲನೆ ನೀಡಲಾಯಿತು.

ಶಾಸಕ ಅರವಿಂದ ಪಾಟೀಲ, ತಹಶೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ನಂದಗಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಭು ಪಾರಿಶ್ವಾಡಕರ, ಪಿಡಿಒ ಸುನೀಲ ಎಂ, ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರ ಸೋನೊಳಿ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜ್ಯೋತಿಯಾತ್ರೆ ಸಮಿತಿಯ ಕಾರ್ಯಕರ್ತರು, ನಂದಗಡ ಮತ್ತು ರಾಯಾಪುರ ಗ್ರಾಮಸ್ಥರು ಇದ್ದರು.

ನಂದಗಡದಿಂದ ಬೀಳ್ಕೊಟ್ಟ ಜ್ಯೋತಿಯಾತ್ರೆ ಹೆಬ್ಬಾಳ, ಲಾಲವಾಡಿ, ಕೌಂದಲ್, ಕರಂಬಳ ಗ್ರಾಮಗಳ ಮೂಲಕ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿ ವೀರಜ್ಯೋತಿಯನ್ನು ಶಾಸಕ ಅರವಿಂದ ಪಾಟೀಲ, ತಹಸೀಲ್ದಾರ ಶಿವಾನಂದ ಉಳ್ಳೇಗಡ್ಡಿ, ಪಟ್ಟಣ ಪಂಚಾಯತಿ ಅಧ್ಯಕ್ಷ ಅಜೀಂ ತೆಲಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಯ್ಯ ಕೋಡೊಳಿ, ಮುಖ್ಯಾಧಿಕಾರಿ ಅಶೋಕ ಮಠದ ಮತ್ತಿತರರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಪಿ.ಎಸ್.ಐ ಪಿ.ಎಸ್ ಪೂಜಾರ, ಕಂದಾಯ ನಿರೀಕ್ಷಕ ಮಾರುತಿ ಚೋಟ ಣ್ಣವರ, ಸಂತೋಷ ಹಡಪದ, ಎನ್.ಜಿ ದೇಶಪಾಂಡೆ, ಮಲ್ಲೇಶಿ ಪೋಳ, ಪ್ರೇಮಾನಂದ ನಾಯ್ಕ, ಡಾ.ಗುರುರಾಜ ಮನಗೂಳಿ, ಮಹಾಂತೇಶ ಕೋಡೊಳಿ, ರಾಜು ಖಾತೆದಾರ, ಜಯರಾಮ ಹಮ್ಮ ಣ್ಣವರ, ಸಿದ್ಧಣ್ಣ ಸಾಣಿಕೊಪ್ಪ ಇದ್ದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯದ ಸಮೇತ ಸಂಚರಿಸಿದ ಜ್ಯೋತಿಯನ್ನು ಮಧ್ಯಾಹ್ನ ಪಟ್ಟಣದಿಂದ ಬೆಳಗಾವಿಯತ್ತ ಬೀಳ್ಕೊಡಲಾಯಿತು. ಪಟ್ಟಣದಿಂದ ಹೊರಟ ಜ್ಯೋತಿ ಗಣೇಬೈಲ, ನಿಟ್ಟೂರು, ಪ್ರಭುನಗರ ಮಾರ್ಗವಾಗಿ ಸಂಚರಿಸಿ ಬೆಳಗಾವಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT