ಭಾನುವಾರ, ಅಕ್ಟೋಬರ್ 20, 2019
21 °C

ಕಾಲೇಜಿಗೆ ₹4.70 ಕೋಟಿ ಅನುದಾನ

Published:
Updated:
Prajavani

ಹೊಸಪೇಟೆ: ‘ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ₹4.70 ಕೋಟಿ ಹಣ ಮಂಜೂರಾಗಿದೆ’ ಎಂದು ಮಾಜಿ ಶಾಸಕ ರತನ್‌ ಸಿಂಗ್‌ ತಿಳಿಸಿದರು.

ಕಾಲೇಜಿನಲ್ಲಿ ಮೂರನೇ ಹಂತದ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘2018–19ನೇ ಸಾಲಿನಲ್ಲಿ ಈ ಅನುದಾನ ಬಿಡುಗಡೆಯಾಗಿದೆ’ ಎಂದು ಹೇಳಿದರು.

‘ಏಳು ತರಗತಿ ಕೊಠಡಿಗಳು, ಮೂರು ಪ್ರಯೋಗಾಲಯಗಳು, ಒಂದು ಗ್ರಂಥಾಲಯ ಕೊಠಡಿ, ಒಂದು ಶೌಚಾಲಯ ಕೊಠಡಿ, ಒಂದು ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ಒಂದು ಆಡಿಟೋರಿಯಂ ನಿರ್ಮಾಣಕ್ಕಾಗಿ ಹಣ ಬಂದಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು‘ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ಪ್ರಾಧ್ಯಾಪಕರಾದ ಟಿ.ಎಚ್‌. ಬಸವರಾಜ, ಪಲ್ಲವ ವೆಂಕಟೇಶ್‌, ನಾಗಣ್ಣ ಕಿಲಾರಿ, ನಾಗವೇಣಿ ಇದ್ದರು.

Post Comments (+)