ದೂಳು ತಡೆಗೆ ರಸ್ತೆ ಮೇಲೆ ನೀರು

7
ಪ್ರಜಾವಾಣಿ ಫಲಶ್ರುತಿ

ದೂಳು ತಡೆಗೆ ರಸ್ತೆ ಮೇಲೆ ನೀರು

Published:
Updated:
ದೂಳು ಏಳದಂತೆ ತಡೆಯಲು ಹೊಸಪೇಟೆಯ ಅನಂತಶಯನಗುಡಿ ಮುಖ್ಯರಸ್ತೆಯ ಮೇಲೆ ಟ್ಯಾಂಕರ್‌ ಮೂಲಕ ನೀರು ಹಾಕುತ್ತಿರುವುದು

ಹೊಸಪೇಟೆ: ಒಳಚರಂಡಿ ಕಾಮಗಾರಿ ನಡೆಯುತ್ತಿರುವ ನಗರದ ಅನಂತಶಯನಗುಡಿ ಬಳಿಯ ಹೊಸಪೇಟೆ–ಕಂಪ್ಲಿ ಮುಖ್ಯರಸ್ತೆಯಲ್ಲಿ ದೂಳು ಏಳದಂತೆ ತಡೆಯಲು ನಿತ್ಯ ಮೂರು ಸಲ ರಸ್ತೆಯ ಮೇಲೆ ನೀರು ಹರಿಸಲಾಗುತ್ತಿದೆ.

‘ಹಂಪಿ ರಸ್ತೆಯಲ್ಲಿ ದೂಳಿನ ಮಜ್ಜನ’ ಶೀರ್ಷಿಕೆಯ ಅಡಿಯಲ್ಲಿ ‘ಪ್ರಜಾವಾಣಿ’ ಇದೇ 25ರಂದು ವಿಶೇಷ ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಟ್ಯಾಂಕರ್ ಮೂಲಕ ರಸ್ತೆ ಮೇಲೆ ನೀರು ಹಾಕಿಸುತ್ತಿದ್ದಾರೆ. ಇದರಿಂದಾಗಿ ದೂಳು ಏಳುವುದು ನಿಂತಿದೆ. ವಾಹನ ಸವಾರರು ಯಾವುದೇ ಕಿರಿಕಿರಿಯಿಲ್ಲದೆ ಸಂಚರಿಸುತ್ತಿದ್ದಾರೆ.

ತಾಲ್ಲೂಕಿನ ಮಲಪನಗುಡಿಯಿಂದ ಅನಂತಶಯನಗುಡಿ ವರೆಗೆ ಬೇಕಾಬಿಟ್ಟಿ ರಸ್ತೆ ಅಗೆದು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ದ್ವಿಪಥದ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಅಗೆದಿರುವ ಕಾರಣ ವಾಹನಗಳು ಒಂದೇ ಪಥದಲ್ಲಿ ಚಲಿಸುವಂತಾಗಿದೆ. ಎಲ್ಲೆಡೆ ಮಣ್ಣು ಹರಡಿಕೊಂಡಿರುವ ಕಾರಣ ಅಪಾರ ಪ್ರಮಾಣದಲ್ಲಿ ದೂಳು ಏಳುತ್ತಿತ್ತು. ವಾಹನ ಸವಾರರು, ದಾರಿ ಹೋಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !