ಗುರುವಾರ , ಜೂನ್ 30, 2022
25 °C

ಬಲಿಜ ಸಂಘದಿಂದ ₹2 ಲಕ್ಷ ಔಷಧ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕರ್ನಾಟಕ ಪ್ರದೇಶ ಬಲಿಜ ಸಂಘ ತಾಲ್ಲೂಕು ಘಟಕದಿಂದ ಗುರುವಾರ ನಗರದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಗೆ ಆಮ್ಲಜನಕ ಸಾಂದ್ರಕ ಯಂತ್ರ ಹಾಗೂ ₹2 ಲಕ್ಷ ಮೊತ್ತದ ಔಷಧ ನೀಡಲಾಯಿತು.

ಸಂಘದ ಮುಖಂಡರಾದ ಆರ್‌.ಕೆ. ರವಿಕುಮಾರ್‌, ಮಧುಸೂದನ್‌ ಅವರು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌ ಅವರಿಗೆ ಆಮ್ಲಜನಕ ಸಾಂದ್ರಕ ಯಂತ್ರ, ಔಷಧ, ಮಾಸ್ಕ್‌, ಸ್ಯಾನಿಟೈಸರ್‌ ಹಸ್ತಾಂತರಿಸಿದರು.

ಮಧುಸೂದನ್‌ ಮಾತನಾಡಿ, ‘ಬಲಿಜ ಸಂಘದಿಂದ ಇಡೀ ರಾಜ್ಯದಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಾಧನ, ಔಷಧ ವಿತರಿಸಲಾಗುತ್ತಿದೆ. ಅದರ ಭಾಗವಾಗಿ ತಾಲ್ಲೂಕು ಆರೋಗ್ಯ ಇಲಾಖೆಗೆ ₹2 ಲಕ್ಷ ಮೊತ್ತದ ವಸ್ತುಗಳನ್ನು ನೀಡಲಾಗಿದೆ. ಕೋವಿಡ್‌ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ, ಔಷಧ ಸಿಕ್ಕು, ಅವರ ಜೀವ ಉಳಿಯಬೇಕು’ ಎಂದು ಹೇಳಿದರು.

ಸಂಘದ ಜಗದೀಶ್ವರ, ಆದಿತ್ಯ, ಸತೀಶ್‌ ಕಾಂಡ್ರ, ಸುಮಿತ್ರಮ್ಮ, ಗೀತಾ, ಶ್ರೀನಿವಾಸ, ಕೀರ್ತಿರಾಜ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಧರ್ಮನಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.