ಸೋಮವಾರ, ಅಕ್ಟೋಬರ್ 21, 2019
26 °C

‘ಚಾರ್ಲಿ ಚಾಪ್ಲಿನ್‌ ಹಾಸ್ಯದಲ್ಲಿ ಮಾನವೀಯತೆ’

Published:
Updated:
Prajavani

ಹೊಸಪೇಟೆ: ‘ಹಾಸ್ಯ ಚಕ್ರವರ್ತಿ ಎಂದೇ ಹೆಸರಾಗಿರುವ ಚಾರ್ಲಿ ಚಾಪ್ಲಿನ್‌ ಅವರ ಚಿತ್ರಗಳಲ್ಲಿ ನಗುವಿನಲ್ಲಿ ಮಾನವೀಯತೆ ಕಾಣಬಹುದು’ ಎಂದು ಸಂಶೋಧನಾ ವಿದ್ಯಾರ್ಥಿ ಎ. ಗಂಗಪ್ಪ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ದ್ರಾವಿಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ‘ಸೃಜನಶೀಲ ಬಹುಮುಖಿ ಪ್ರತಿಭೆ ಚಾರ್ಲಿ ಚಾಪ್ಲಿನ್’ ಕುರಿತು ಮಾತನಾಡಿದರು.

‘ಚಾಪ್ಲಿನ್ ತನ್ನ ಬಾಲ್ಯ ಜೀವನದ ವಿಷಾದ ಘಟನೆಗಳನ್ನು ತನ್ನ ಎಲ್ಲಾ ಚಿತ್ರಗಳಿಗೆ ವಿನೋದದ ವಸ್ತುವನ್ನಾಗಿಸಿಕೊಂಡು ಜಗತ್ತಿಗೆ ಪ್ರೀತಿ, ಕರುಣೆ, ಮಾನವೀಯತೆ ಸಂದೇಶ ಸಾರಿದ್ದಾನೆ. 

‘ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಚಿತ್ರಕಥೆಗಾರನಾಗಿ ಸಿನಿಮಾದ ಬಹು ಆಯಾಮ-ವಿಧಗಳನ್ನು ಕರಗತ ಮಾಡಿಕೊಂಡು ಹಾಸ್ಯವನ್ನು ವಸ್ತುವಾಗಿರಿಸಿ ಅದರ ಮೂಲಕ ನವಿರಾದ ವರ್ಗ ಸಂಘರ್ಷ, ಹಿಂಸೆಯ ಸ್ವರೂಪ, ಬಡತನ, ನಿರುದ್ಯೋಗ ಇತ್ಯಾದಿ ಅಂಶಗಳನ್ನು ವಕ್ರತೆಯ ಮೂಲಕ ಸಿನಿಮಾಗಳಲ್ಲಿ ತೋರಿಸುವ ಪ್ರಯತ್ನ ಮಾಡಿದರು’ ಎಂದರು.

ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಕುಪ್ಪೇಲೂರ ಮಾತನಾಡಿ, ‘ಚಾರ್ಲಿ ಚಾಪ್ಲಿನ್ ತುಟಿಗೆ ನಗು, ಮೆದುಳಿಗೆ ವಿವೇಕ, ಮನಸ್ಸಿಗೆ ರಂಜನೆಯನ್ನು ಏಕಕಾಲಕ್ಕೆ ಉಣಬಡಿಸುವ ಸೃಜನಶೀಲ ಕಲಾವಿದ. ಚಾಪ್ಲಿನ್ ಹಾಸ್ಯದ ಮೂಲಕ ಮಾನವೀಯ ಸಂಬಂಧಗಳನ್ನು ಪ್ರತಿಪಾದಿಸಿದವರು’ ಎಂದರು.

ಕುಲಸಚಿವ ಎ ಸುಬ್ಬಣ್ಣ ರೈ, ವಿಭಾಗದ ಮುಖ್ಯಸ್ಥ ಸಿ. ವೆಂಕಟೇಶ, ಪ್ರಾಧ್ಯಾಪಕರಾದ ಮಾಧವ ಪೆರಾಜೆ, ಸುಚೇತ ನವರತ್ನ, ಪಿ. ಪ್ರಭಾಕರ ಇದ್ದರು.

Post Comments (+)