ಶನಿವಾರ, ಜುಲೈ 31, 2021
25 °C

ಗಂಗಾವತಿ: 32 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಗರದ ಕಿಲ್ಲಾ ಏರಿಯಾ ನಿವಾಸಿಯಾಗಿರುವ 32 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 

ಈ ಹಿನ್ನೆಲೆಯಲ್ಲಿ ನಗರದ ಕಿಲ್ಲಾ ಏರಿಯಾಕ್ಕೆ ದೌಡಾಯಿಸಿದ ನಗರಸಭೆ ಮತ್ತು ತಾಲ್ಲೂಕಾಡಳಿತ ಅಧಿಕಾರಿಗಳು ಸೋಂಕಿತ ವ್ಯಕ್ತಿ ವಾಸವಿದ್ದ 200 ಮೀ ವ್ಯಾಪ್ತಿಯಲ್ಲಿ ಸೀಲ್ ಡೌನ್‌ಗೆ ಆದೇಶಿಸಿದ್ದಾರೆ. 

ಸೋಂಕಿತ ವ್ಯಕ್ತಿಯು ಆಂಧ್ರ ಮೂಲದವರಾಗಿದ್ದು, ಕೆಲ ದಿನಗಳ ಹಿಂದೆ ಆದೋನಿಯಿಂದ ನಗರಕ್ಕೆ ವಾಪಾಸ್ಸಾಗಿದ್ದರು.

ಪೊಲೀಸರು ಮತ್ತು ತಾಲ್ಲೂಕಾಡಳಿತ ಅಧಿಕಾರಿಗಳು ವ್ಯಕ್ತಿಯ ಟ್ರಾವೆಲ್ ಹಿಸ್ಟರಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು