ಬುಧವಾರ, ಜುಲೈ 28, 2021
28 °C
ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಅವ್ಯವಸ್ಥೆ; ಮನೆಗೆ ಕಳುಹಿಸಿಕೊಡುವಂತೆ ಆಗ್ರಹ

ನೆಲದಲ್ಲೇ ಮಲಗಿದ್ದ ಸೋಂಕಿತರು!

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರಿನ ಇಎಸ್‌ಐ ಆಸ್ಪತ್ರೆಯಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಸೋಂಕಿತರು ಪರದಾಡುತ್ತಿದ್ದು, ಮನೆಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಆಸ್ಪತ್ರೆಗೆ ಬಂದಾಗ ಹಾಸಿಗೆ ಕಲ್ಪಿಸದ ಕಾರಣ ಕೆಲವರು ನೆಲದ ಮೇಲೆಯೇ ಮಲಗಿ ಕಾಲ ಕಳೆದಿದ್ದಾರೆ. ಅವ್ಯವಸ್ಥೆಯ ವಿಡಿಯೊ ಮಾಡಿರುವ ಸೋಂಕಿತರು, ಅದನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಭರ್ತಿಯಾದ ಕಾರಣ, ಗಂಭೀರ ಲಕ್ಷಣಗಳು ಇಲ್ಲದ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 70 ಮಂದಿ ಇದ್ದಾರೆ.

‘ಒಂದೇ ಕೊಠಡಿಯಲ್ಲಿ 20 ಮಹಿಳೆಯರನ್ನು ತುಂಬಿದ್ದು, ಸ್ವಚ್ಛಗೊಳಿಸುವವರೇ ಇಲ್ಲ. ಎರಡು ಶೌಚಾಲಯಗಳಿದ್ದು, ಗಬ್ಬು ನಾರುತ್ತಿವೆ. ಸರಿಯಾಗಿ ನೀರೂ ಇಲ್ಲ. ಈ ಕೇಂದ್ರಕ್ಕೆ ಬಂದ ಮೇಲೆ ನೆಗಡಿ, ಕೆಮ್ಮು ಶುರುವಾಗಿದೆ’ ಎಂದು ಸೋಂಕಿತರೊಬ್ಬರು ದೂರಿದರು.

‘ಸರಿಯಾಗಿ ಔಷಧ ಕೊಡುತ್ತಿಲ್ಲ. ಸಮಸ್ಯೆ ಇಲ್ಲದವರಿಗೆ ಚಿಕಿತ್ಸೆ ಏಕೆ ಎಂದು ಕೇಳುತ್ತಾರೆ. ಹಾಗಾದರೆ ನಮ್ಮನ್ನು ಮನೆಗೆ ಕಳಿಸಲಿ. ಇಲ್ಲೇಕೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಕಂಟೈನ್‌ಮೆಂಟ್‌ ವಲಯದಲ್ಲಿ ಔಷಧ ಸಿಂಪಡಿಸುವಾಗ ನನಗೆ ಸೋಂಕು ತಗುಲಿರಬಹುದು. ಮೂರು ದಿನಗಳ ಹಿಂದೆ ಈ ಆಸ್ಪತ್ರೆಗೆ ಕರೆತಂದರು. ಇಲ್ಲಿಗೆ ಬಂದಾಗ ಹಾಸಿಗೆಗಳೇ ಇರಲಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದ ಮೇಲೆ ವ್ಯವಸ್ಥೆ ಮಾಡಿದರು’ ಎಂದು ಬನ್ನಿಮಂಟಪ‍ದಲ್ಲಿ ಕೆಲಸ ಮಾಡುವ ಗುತ್ತಿಗೆ ಪೌರಕಾರ್ಮಿಕರೊಬ್ಬರು ತಿಳಿಸಿದರು.

ಮಾಹಿತಿ ಇಲ್ಲ: ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಣ್ಣಪುಟ್ಟ ವಿಚಾರ ಇರಬಹುದು. ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು