ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಮಳೆಯ ನಡುವೆ ರಸ್ತೆಯಲ್ಲೇ ಪ್ರತ್ಯಕ್ಷವಾದ ಮೊಸಳೆ

Last Updated 20 ಜುಲೈ 2020, 13:20 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಭಾನುವಾರ ರಾತ್ರಿ ಸುರಿಯುತ್ತಿದ್ದ ಮಳೆಯ ನಡುವೆ ಸಂಚರಿಸುತ್ತಿದ್ದ ಕಾರು ಚಾಲಕರಿಗೆ ರಸ್ತೆ ಪಕ್ಕ ಮೊಸಳೆಯೊಂದು ಕಾಣಿಸಿಕೊಂಡಿದ್ದ ಸಂಗತಿ ಸೋಮವಾರ ಬೆಳಕಿಗೆ ಬಂದಿದೆ.

ನಗರದ ರೇಡಿಯೋ ಪಾರ್ಕ್‌ ಪ್ರದೇಶದಲ್ಲಿರುವ ಎರಡನೇ ರೈಲು ಗೇಟ್‌ ಸಮೀಪ ಸಂಚರಿಸುತ್ತಿದ್ದ ಕಾರುದೀಪದ ಬೆಳಕಿನಲ್ಲಿ ಬೇವಿನ ಮರದ ಕೆಳಗಿನಿಂದ ಚರಂಡಿಯ ಕಡೆಗೆ ಮೊಸಳೆಯೊಂದು ತೆವಳಿಕೊಂಡು ಹೋಗುವ ವೀಡಿಯೋ ವೈರಲ್‌ ಆಗಿತ್ತು. ಕಿರುಮೃಗಾಲಯದ ಸಮೀಪವೇ ಈ ಮೊಸಳೆ ಕಾಣಿಸಿಕೊಂಡಿದೆ.

ಮೊಸಳೆಯು ಕಾಣುತ್ತಲೇ ಅಚ್ಚರಿ ವ್ಯಕ್ತಪಡಿಸುವ ಕಾರಿನಲ್ಲಿದ್ದವರು, ‘ರೇಡಿಯೋ ‍ಪಾರ್ಕ್‌ ಸೆಕೆಂಟ್‌ ಗೇಟ್‌ ಅಲ್ವಾ ಇದು. ಬಲೇ ದಾರುಣವಪ್ಪ ಇದು. ಮೃಗಾಲಯದವರು ಯಾರೂ ನೋಡುವುದಿಲ್ಲವೇನೋ‍’ ಎಂದು ತೆಲುಗಿನಲ್ಲಿ ಉದ್ಗರಿಸುವುದೂ ಕೇಳಿಸುತ್ತದೆ.

’ರಾತ್ರಿ ಹೊತ್ತು ಇದೇ ಜಾಗದಲ್ಲೇ ಹಲವು ಬಾರಿ ಕಾರು ನಿಲ್ಲಿಸಿ ಇಳಿದಿದ್ದೇನೆ. ನಿನ್ನೆ ಕೂಡ ಇಲ್ಲೇ ಇಳಿದು ನಡೆದು ಹೋಗಿದ್ದೆ’ ಎಂದೂ ಕಾರಲ್ಲಿದ್ದವರು ಹೇಳುತ್ತಾರೆ. ಕಾರನ್ನು ಬದಿಗೆ ನಿಲ್ಲಿಸಿ ಮತ್ತೆ ಅವರು ಹೆಡ್‌ಲೈಡ್‌ ಬಿಟ್ಟಾಗಲೂ ಮೊಸಳೆ ಅಲ್ಲೇ ಇರುವುದು ಕಾಣತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT