‘ಶಿಕ್ಷಣದಿಂದ ಮನುಷ್ಯನ ಘನತೆ ಹೆಚ್ಚಳ’

7

‘ಶಿಕ್ಷಣದಿಂದ ಮನುಷ್ಯನ ಘನತೆ ಹೆಚ್ಚಳ’

Published:
Updated:
Prajavani

ಬಳ್ಳಾರಿ: ಶಿಕ್ಷಣ ಮನುಷ್ಯನ ಘನತೆ ಹೆಚ್ಚಿಸುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್ ಕಾಂತ್ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಂಡಿದ್ದ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮಾತಮಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು ಈಗಲೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಈಗಲೂ ಮಹಿಳೆಯರ ಸಾಕ್ಷರತೆ ಮಟ್ಟ ಪುರುಷರಿಗಿಂತ ಕಡಿಮೆ ಇದೆ ಎಂದು ಹೇಳಿದರು.

ಸಮಾಜಕ್ಕೆ ಮಹಿಳಾ ಶಿಕ್ಷಣದ ಅವಶ್ಯಕತೆ ಇದೆ. ಮಹಿಳೆಯರ ಶಿಕ್ಷಣ ಮತ್ತು ಸ್ವಾಯತ್ತತೆ ಹಾಗೂ ಶಿಕ್ಷಣಕ್ಕಾಗಿ ಸಾವಿತ್ರಿ ಬಾಪುಲೆ ಹೋರಾಡಿದ್ದರು. ಆದರೆ, ಅಸಮಾನತೆ ಇನ್ನೂ ತೊಲಗಿಲ್ಲ. ಮಹಿಳೆ ಶಿಕ್ಷಿತಳಾದರೆ, ಒಬ್ಬ ಒಳ್ಳೆ ತಾಯಿ ಹಾಗೂ ಒಳ್ಳೆ ಗೃಹಿಣಿಯಾಗುತ್ತಾಳೆ ಎಂದರು. ನೇತ್ರ ತಜ್ಞ ಡಾ.ವಿಜಯ ನಾಗರಾಜ್‍ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. 

ನಾಟ್ಯ ಕಲಾ ಸಂಘದಿಂದ ಇಂದ್ರಾಣಿ ನಿರ್ದೇಶನದಲ್ಲಿ ಜನ ನಾಟ್ಯ, ಸಂತೋಷಿ ಸಂಗೀತಾಲಯದಿಂದ ರಾಜಲಕ್ಷ್ಮಿರಾವ್ ಮತ್ತು ಸಂಗಡಿಗರಿಂದ ಜನ ಸಂಗೀತ, ಸುಜಾತ ಕಲಾ ಟ್ರಸ್ಟ್‌ನಿಂದ ವಿಜಯೇಂದ್ರ ಕುಮಾರ್ ನಿರ್ದೇಶನದಲ್ಲಿ ನೃತ್ಯೋಲ್ಲಾಸ, ಮೆಟ್ರಿಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ತಿರುಮಲ ನಿರ್ದೇಶನದಲ್ಲಿ ನೃತ್ಯರೂಪಕ, ಅಂಕುರ ತಂಡದವರಿಂದ ‘ಕೋಕೋ ಕೋಳೀಕೆ ರಂಗ’ ಮಕ್ಕಳ ನಾಟಕ, ಆವಿಷ್ಕಾರ ತಂಡದಿಂದ ಪ್ರಗತಿಪರ ಗೀತೆಗಳು ಮತ್ತು ಸೃಜನ ಸಾಂಸ್ಕೃತಿಕ ಸಂಘಟನೆಯಿಂದ ‘ಅಪರಾಧಿ ಯಾರು’ ನಾಟಕ ಪ್ರಸ್ತುತಪಡಿಸಿದರು.

ಎಐಡಿಎಸ್ಒ ರಾಜ್ಯಾಧ್ಯಕ್ಷ ಎನ್.ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಬಡಿಗೇರ್, ಸೃಜನ ಸಾಂಸ್ಕೃತಿಕ ಸಂಘಟನೆಯ ಎಸ್.ಜಿ.ನಾಗರತ್ನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !