ಬೇಳೆ ಕಾಳು ದರ ಭಾರಿ ಕುಸಿತ; ರೈತರು ಕಂಗಾಲು

7
ಅನ್ನದಾತ, ವ್ಯಾಪಾರಿಗಳಿಗೆ ಸಂಕಷ್ಟ; ಜನಸಾಮಾನ್ಯರಿಗೆ ಸಂತಸ

ಬೇಳೆ ಕಾಳು ದರ ಭಾರಿ ಕುಸಿತ; ರೈತರು ಕಂಗಾಲು

Published:
Updated:
Deccan Herald

ಹೊಸಪೇಟೆ: ಮಾರುಕಟ್ಟೆಯಲ್ಲಿ ಬೇಳೆ ಕಾಳು ದರ ಕುಸಿದಿದ್ದು, ರೈತರು ಹಾಗೂ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಬೆಲೆ ಕುಸಿತದಿಂದ ಜನಸಾಮಾನ್ಯರು ಖುಷಿಗೊಂಡಿದ್ದಾರೆ.

ಹೆಸರು, ತೊಗರಿ, ಉದ್ದು, ಕಡಲೆ, ಜೋಳ, ಸೋಯಾಬಿನ್‌, ಭತ್ತ ಹೀಗೆ ಎಲ್ಲದರ ಬೆಲೆ ಭಾರಿ ಕುಸಿದಿದೆ. ಕಳೆದೆರಡು ವರ್ಷಗಳಂತೆಯೇ ಈ ಸಲವೂ ಮಾರುಕಟ್ಟೆಯಲ್ಲಿ ಉತ್ತಮ ಬೆಳೆ ಸಿಗಬಹುದು ಅಂದುಕೊಂಡು ಬೆಳೆ ಬೆಳೆದಿದ್ದ ರೈತರ ನಿರೀಕ್ಷೆ ಹುಸಿಯಾಗಿದೆ. ಹೆಚ್ಚಿನ ಲಾಭ ಗಳಿಕೆಯಿಂದ ರೈತರಿಂದ ಈ ಹಿಂದೆ ಅಪಾರ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನು ಖರೀದಿಸಿದ್ದ ವ್ಯಾಪಾರಿಗಳಿಗೂ ಬೆಲೆ ಕುಸಿತದ ಬಿಸಿ ತಟ್ಟಿದೆ.

ಸದ್ಯ ಪ್ರತಿ ಕ್ವಿಂಟಾಲ್‌ ತೊಗರಿ ಬೇಳೆ ₨37 ಸಾವಿರದಿಂದ ₨40 ಸಾವಿರಕ್ಕೆ ಮಾರಾಟವಾಗುತ್ತಿದೆ. ಎರಡು ವರ್ಷಗಳ ಹಿಂದೆ ₨80 ಸಾವಿರದಿಂದ ₨90 ಸಾವಿರದ ವರೆಗೆ ಇತ್ತು. ಹಿಂದಿನ ವರ್ಷ ₨55ರಿಂದ ₨60 ಸಾವಿರ ಇತ್ತು. ಅದೇ ರೀತಿ ಹೆಸರಿನ ದರ ಕೂಡ ಕಮ್ಮಿಯಾಗಿದೆ. ಪ್ರತಿ ಕ್ವಿಂಟಾಲ್‌ ಹೆಸರು ₨45ರಿಂದ ₨48 ಸಾವಿರಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ₨50ರಿಂದ ₨60 ಸಾವಿರದ ವರೆಗೆ ಬಿಕರಿ ಆಗುತ್ತಿತ್ತು. ಜೋಳ ಈ ಹಿಂದೆ ₨40ರಿಂದ ₨45 ಸಾವಿರಕ್ಕೆ ತಲುಪಿತ್ತು. ಈಗ ಅದು ₨2,200ರಿಂದ ₨3 ಸಾವಿರಕ್ಕೆ ತಗ್ಗಿದೆ. ಉದ್ದು, ಕಡಲೆ, ಸೋಯಾಬಿನ್‌ ಬೆಲೆ ಕೂಡ ಇದೇ ರೀತಿ ಇಳಿಕೆಯಾಗಿದೆ.

ದಲ್ಲಾಳಿಗಳು ಹಾಗೂ ಉತ್ಪಾದನೆಯಲ್ಲಿನ ಏರಿಳಿತದಿಂದ ಈ ರೀತಿ ರೈತರು ಬೆಳೆದ ಬೆಳೆಗಳಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದ ಅಂತಿಮವಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !