ಅಹಿಂಸೆಯ ದೊಡ್ಡ ರೂಪಕ ಗಾಂಧೀ

7
ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ 150 ಸಂಭ್ರಮ

ಅಹಿಂಸೆಯ ದೊಡ್ಡ ರೂಪಕ ಗಾಂಧೀ

Published:
Updated:
Deccan Herald

 ಬಳ್ಳಾರಿ: ‘ಮಹಾತ್ಮ ಗಾಂಧೀಜಿ ಸಂಪೂರ್ಣವಾಗಿ ಅರ್ಥವಾಗದಿದ್ದರೂ ನಿರಾಕರಿಸಲಾಗದಷ್ಟು ದೊಡ್ಡ ವ್ಯಕ್ತಿತ್ವವುಳ್ಳವರಾಗಿದ್ದರು’ ಎಂದು ಪ್ರೊ.ಹೊನ್ನೂರ್ ಅಲಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಮತ್ತು ವಾರ್ತಾ–ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ‘ಗಾಂಧೀಜಿ ಏಕಕಾಲಕ್ಕೆ ಭಾರತೀಯರ ಮನಃ ಪರಿವರ್ತನೆ ಮಾಡುತ್ತಾ, ಬ್ರಿಟೀಷರ ಧೋರಣೆಗಳನ್ನೂ ವಿಮರ್ಶಿಸುತ್ತಿದ್ದರು. ಅದಕ್ಕೆ ಅಹಿಂಸೆಯೇ ಪ್ರಬಲ ಅಸ್ತ್ರವಾಗಿದ್ದು ವಿಶೇಷ. ಅವರು ಇಡೀ ವಿಶ್ವದಲ್ಲಿ ಅಹಿಂಸೆಯ ದೊಡ್ಡ ರೂಪಕವಾಗಿದ್ದಾರೆ’ ಎಂದರು.

‘ಗಾಂಧೀ ಇಂದು ಬದುಕಿದ್ದರೆ ಯುವಜನರಿಂದ ಸ್ವಾತಂತ್ರ್ಯದ ದುರ್ಬಳಕೆ ನೋಡಿ ನೋಡಿ ಮರುಕಪಡುತ್ತಿದ್ದರು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಪಟ್ಟರು.

‘ಹಿರಿಯರು ಯುವಜನರಿಗೆ ಗಾಂಧೀ ಜೀವನ ಚರಿತ್ರೆ ಮತ್ತು ತತ್ವಗಳನ್ನು ತಿಳಿಸುವಲ್ಲಿ ವಿಫಲವಾಗಿದ್ದಾರೆ. ಯುವಜನರು ಗಾಂಧೀ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಗಾಂಧೀ ತತ್ವದ ಪಾಲನೆ ಮೂಲಕವೇ ಸಮಾಜದ ಪಿಡುಗುಗಳನ್ನು ಹೋಗಲಾಡಿಸಬೇಕಿದೆ’ ಎಂದರು.

ಶಾಸಕ ಅಲ್ಲಂ ವೀರಭದ್ರಪ್ಪ ಮತ್ತು ಜಿ.ಸೋಮಶೇಖರ ರೆಡ್ಡಿ ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಸಿ.ಭಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಿಡುಗಡೆ: ಇಲಾಖೆಯ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’, ‘ಜನಪದ’ ವಿಶೇಷ ಸಂಚಿಕೆ ಮತ್ತು ‘ಮಾರ್ಚ್ ಆಫ್ ಕರ್ನಾಟಕ’ ಕಿರುಹೊತ್ತಿಗೆಗಳನ್ನು ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಕೊನೆಗೆ ಗಾಂಧೀಜಿ ಜೀವನ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕೆ.ದೊಡ್ಡ ಬಸಪ್ಪ ಮತ್ತು ಸಂಗಡಿಗರು ಭಜನೆಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ, ಜಿ.ಪಂ ಉಪಾಧ್ಯಕ್ಷೆ ಪಿ.ದೀನಾ, ಮೇಯರ್ ಸುಶೀಲಾಬಾಯಿ, ಸದಸ್ಯರಾದ ಪರ್ವೀನ್ ಬಾನು, ಬೆಣಕಲ್ ಬಸವರಾಜ್, ಮಲ್ಲನಗೌಡ, ದಿವ್ಯಕುಮಾರಿ, ಆಯುಕ್ತ ಬಿ.ಎಚ್.ನಾರಾಯಣಪ್ಪ, ಕನ್ನಡ–ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇದ್ದರು.

ಗಾಂಧೀಜಿ ಜೀವನ ಸಾಧನೆ ಕುರಿತ ಫೋಟೋಗಳ ಪ್ರದರ್ಶನ ವಿದ್ಯಾರ್ಥಿಗಳ ಗಮನ ಸೆಳೆದಿತ್ತು. ವಿವಿಧ ಶಾಲೆ–ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !