ಪರ್ಯಾಯ ಬೆಳೆಯೇ ಸೂಕ್ತ: ಸಲಹೆ

7
ಮಳೆ ಅಭಾವ: ಬಾಡುತ್ತಿರುವ ಬೆಳೆ

ಪರ್ಯಾಯ ಬೆಳೆಯೇ ಸೂಕ್ತ: ಸಲಹೆ

Published:
Updated:

ಬಳ್ಳಾರಿ: ‘ಜಿಲ್ಲೆಯಲ್ಲಿ ಮಳೆ ಅಭಾವದಿಂದ ಬೆಳೆಗಳು ಬಾಡುತ್ತಿದ್ದು, ರೈತರು ಪರ್ಯಾಯ ಬೆಳೆಗಳನ್ನು ಬೆಳೆಯುವುದು ಸೂಕ್ತ’ ಎಂದು ಕೃಷಿ ಜಂಟಿ ನಿರ್ದೇಶಕ ಎಂ.ಎಸ್.ದಿವಾಕರ್ ಸಲಹೆ ನೀಡಿದ್ದಾರೆ.

ಭತ್ತ, ಜೋಳ, ಮುಸುಕಿನ ಜೋಳ, ನವಣೆ, ತೊಗರಿ, ಸೂರ್ಯಕಾಂತಿ, ಶೇಂಗಾ ಮತ್ತು ಹತ್ತಿ ಜಿಲ್ಲೆಯ ಪ್ರಮುಖ ಬೆಳೆಗಳು.

‘ಆಗಸ್ಟ್ ತಿಂಗಳಲ್ಲಿ ಮಳೆ ಪ್ರಾರಂಭವಾದರೆ ಮಳೆಯಾಶ್ರಿತ ರೈತರು ನವಣೆ, ಸೂರ್ಯಕಾಂತಿ, ರಾಗಿ ಹಾಗೂ ಹುರುಳಿ ಕಾಳು ಬೆಳೆಗಳನ್ನು ಬಿತ್ತನೆ ಮಾಡಬಹುದು. ಹಿಂಗಾರು ಜೋಳದ ಬಿತ್ತನೆಗಾಗಿ ಜಮೀನುಗಳನ್ನು ತಯಾರು ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಪರ್ಯಾಯ ಬೆಳೆಗಳಾಗಿ ಸೂರ್ಯಕಾಂತಿ, ನವಣೆ, ರಾಗಿ ಬೆಳೆಗಳ ಬಿತ್ತನೆ ಬೀಜಗಳನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಾಗುವಂತೆ ದಾಸ್ತಾನು ಮಾಡಲಾಗಿದೆ. ರೈತರು ಸಹಾಯಧನದಲ್ಲಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !