ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸಂತೋಷ್ ಬಂಧನ

ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಹತ್ಯೆ ಪ್ರಕರಣ
Last Updated 1 ಆಗಸ್ಟ್ 2022, 2:53 IST
ಅಕ್ಷರ ಗಾತ್ರ

ಅರಸೀಕೆರೆ: ಹೋಬಳಿಯ ಬೇವಿನಹಳ್ಳಿ ದೊಡ್ಡ ತಾಂಡದ ಬಳಿ ನಡೆದಿದ್ದ ದಾವಣಗೆರೆಯ ದೇಹದಾರ್ಢ್ಯ ತರಬೇತುದಾರ ಧನ್ಯಕುಮಾರ್ ಅಲಿಯಾಸ್ ಧನು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ನಡೆದ ಎರಡು ದಿನಗಳಲ್ಲಿ ಕೊಲೆ ಮಾಡಿದ ರವಿ ಜಿ, ಮಲ್ಲಿಕಾರ್ಜುನ್, ಸುದೀಪ್ ಸೇರಿ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಪ್ರಮುಖ ಆರೋಪಿ ದಾವಣಗೆರೆ ಸಂತೋಷ್ ಕುಮಾರ್ ಅಲಿಯಾಸ್ ಕಣುಮನ ಕುರಿತು ಮಾಹಿತಿ ನೀಡಿದ್ದರು.

ಆರೋಪಿಗಳ ಹೇಳಿಕೆ ಆಧರಿಸಿ ಸಂತೋಷ್ ಕುಮಾರ್ ಅಲಿಯಾಸ್ ಕಣುಮನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳದಲ್ಲಿ ಬಂಧಿಸಿಲಾಗಿದೆ. ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಸಂತೋಷ್ ರೌಡಿ ಶೀಟರ್ ಆಗಿದ್ದಾನೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಏ.27 ರಂದು ಧನ್ಯಕುಮಾರ್ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ತೋಪಿಗೆ ಊಟಕ್ಕೆ ಬಂದಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT