ಹಂಪಿ ಸ್ಮಾರಕ, ಬಾಳೆ ತೋಟ ಜಲಾವೃತ

7
ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹೊರಕ್ಕೆ

ಹಂಪಿ ಸ್ಮಾರಕ, ಬಾಳೆ ತೋಟ ಜಲಾವೃತ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ಗುರುವಾರ ನದಿಗೆ ನೀರು ಹರಿಸಿದ್ದರಿಂದ ತಾಲ್ಲೂಕಿನ ಹಂಪಿಯ ಕೆಲ ಸ್ಮಾರಕಗಳು ಹಾಗೂ ಬಾಳೆ, ಕಬ್ಬಿನ ತೋಟ ನೀರಿನಲ್ಲಿ ಮುಳುಗಡೆಯಾಗಿವೆ.

ಅಣೆಕಟ್ಟೆಯಿಂದ ನದಿಗೆ 2,31,021 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. 2,09,319 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಎಲ್ಲ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. 28 ಗೇಟ್‌ಗಳನ್ನು 5.5 ಅಡಿ ತೆರೆದು ಪ್ರತಿಯೊಂದು ಗೇಟ್‌ನಿಂದ 7,460 ಕ್ಯುಸೆಕ್‌, ಇನ್ನುಳಿದ ಐದು ಗೇಟ್‌ಗಳನ್ನು 1 ಅಡಿ ತೆಗೆದು 1,432 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಹಂಪಿಯ ಕೋದಂಡರಾಮ ದೇಗುಲದೊಳಗೆ ನೀರು ನುಗ್ಗಿದೆ. ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಪಿತೃಪ್ರಧಾನ ಮಂಟಪ ಸ್ಮಾರಕಗಳು ಕಳೆದ ಕೆಲವು ದಿನಗಳ ಹಿಂದೆಯೇ ಮುಳುಗಡೆಯಾಗಿವೆ. ಗುರುವಾರ 2 ಲಕ್ಷ ಕ್ಯುಸೆಕ್‌ ಅಧಿಕ ನೀರು ಬಿಟ್ಟಿರುವುದರಿಂದ ನದಿ ಪಾತ್ರಕ್ಕೆ ಹೊಂದಿಕೊಂಡಂತೆ ಇರುವ ಹಂಪಿ ಸಮೀಪದ ಬಾಳೆ, ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆಹಾನಿ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !