ಹೊಸಪೇಟೆ: ಲಾರಿಗಳಿಗೆ ಜಿ.ಪಿ.ಎಸ್. ಅಳವಡಿಸಲು ಕಾಲಾವಕಾಶ ವಿಸ್ತರಿಸಬೇಕೆಂದು ಆಗ್ರಹಿಸಿ ಲಾರಿ ಮಾಲೀಕರು ಮತ್ತು ಚಾಲಕರು ಗುರುವಾರ ನಗರದ ಸಂಡೂರು ರಸ್ತೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವೇ ಬ್ರಿಜ್ ಎದುರು ಪ್ರತಿಭಟನೆ ನಡೆಸಿದರು.
‘ಹೊಸಪೇಟೆ, ಸಂಡೂರು ವ್ಯಾಪ್ತಿಯ ಗಣಿಗಳಲ್ಲಿ ಒಟ್ಟು ಏಳು ಸಾವಿರಕ್ಕೂ ಅಧಿಕ ಲಾರಿಗಳು ಓಡಾಡುತ್ತವೆ. ಈಗಾಗಲೇ ಎರಡು ಸಾವಿರ ಲಾರಿಗಳಿಗೆ ಜಿ.ಪಿ.ಎಸ್. ಅಳವಡಿಸಲಾಗಿದೆ. ಮಿಕ್ಕುಳಿದ ಲಾರಿಗಳಿಗೂ ಜಿ.ಪಿ.ಎಸ್. ಅಳವಡಿಸಲಾಗುವುದು. ಅದಕ್ಕೆ ಗಣಿ ಇಲಾಖೆ ಸಮಯ ವಿಸ್ತರಿಸಬೇಕು’ ಎಂದುಲಾರಿ ಮಾಲೀಕರ ಸಂಘದ ಸದಸ್ಯ ದಾದಾ ಕಲಂದರ್ ಹೇಳಿದರು.
‘ಜೂ. 25ರ ಒಳಗೆ ಜಿ.ಪಿ.ಎಸ್. ಅಳವಡಿಸಲು ಕಾಲಾವಕಾಶ ನೀಡಲಾಗಿತ್ತು. ಆ ಅವಧಿ ಕೊನೆಗೊಂಡಿದೆ. ಇನ್ನೂ ಬಹಳಷ್ಟು ಲಾರಿಗಳಿಗೆ ಜಿ.ಪಿ.ಎಸ್. ಅಳವಡಿಸಬೇಕಿರುವುದರಿಂದ ಸಮಯ ಬೇಕಾಗುತ್ತದೆ. ಹಾಗಾಗಿ ಇಲಾಖೆ ಸಮಯ ವಿಸ್ತರಿಸಬೇಕು. ಅಲ್ಲಿಯವರೆಗೆ ಲಾರಿಗಳ ಓಡಾಟದ ಮೇಲೆ ನಿರ್ಬಂಧ ವಿಧಿಸಬಾರದು’ ಎಂದು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.