ಗುರುವಾರ , ನವೆಂಬರ್ 21, 2019
27 °C

ಜಾನಪದ ಅಕಾಡೆಮಿಗೆ ಮಂಜಮ್ಮ ಜೋಗತಿ ಅಧ್ಯಕ್ಷೆ

Published:
Updated:
Prajavani

ಹೊಸಪೇಟೆ: ಜೋಗತಿ ನೃತ್ಯದ ಮೂಲಕ ಮನೆ ಮಾತಾಗಿರುವ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಸರ್ಕಾರ ನೇಮಕಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಮಂಜಮ್ಮ ಅವರು ಈ ಹಿಂದೆ ಜಾನಪದ ಅಕಾಡೆಮಿ ಸದಸ್ಯರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜ್ಯ ಸೇರಿದಂತೆ ಪರರಾಜ್ಯಗಳಲ್ಲಿ ಜೋಗತಿ ನೃತ್ಯವನ್ನು ಪ್ರದರ್ಶಿಸಿ, ಅದರ ಹಿರಿಮೆಯನ್ನು ಹೆಚ್ಚಿಸಲು ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅಧ್ಯಕ್ಷರಾಗಿ ನೇಮಕಗೊಂಡ ವಿಷಯಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿದಾಗ, ‘ಸರ್ಕಾರದ ಯಾವ ಪ್ರತಿನಿಧಿಯೂ ನನ್ನನ್ನು ಇದುವರೆಗೆ ಸಂಪರ್ಕಿಸಿ ವಿಷಯ ತಿಳಿಸಿಲ್ಲ. ನನ್ನ ಸ್ನೇಹಿತರಿಂದ ವಿಷಯ ಗೊತ್ತಾಗಿದ್ದು, ಕೇಳಿ ಸಂತೋಷವಾಗಿದೆ. ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೆ ಹಾಕಿದ್ದಾರೆ. ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸಲು ಶ್ರಮಿಸುವೆ’ ಎಂದು ಮಂಜಮ್ಮ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)