ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಚುನಾವಣೆ: ಸಿದ್ಧತೆ ಪೂರ್ಣ; ಮೇ 29ರಂದು ಮತದಾನ

Last Updated 28 ಮೇ 2019, 14:10 IST
ಅಕ್ಷರ ಗಾತ್ರ

ಸಂಡೂರು: ಇಲ್ಲಿನ ಪುರಸಭೆ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬುಧವಾರ ಮತದಾನ ನಡೆಯಲಿದೆ.

‘ಪುರಸಭೆಯ 23 ವಾರ್ಡ್‍ಗಳ ಚುನಾವಣೆಗೆ 34 ಮತಗಟ್ಟೆ ತೆರೆಯಲಾಗಿದೆ. 136 ಮತಗಟ್ಟೆ ಸಿಬ್ಬಂದಿ ಹಾಗೂ 16 ಕಾಯ್ದಿಟ್ಟ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತದಾನ ಶಾಂತಿಯುತವಾಗಿ ನಡೆಸಲು ಒಟ್ಟು 140 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ತಹಶೀಲ್ದಾರ್ ಎಚ್.ಜೆ. ರಶ್ಮಿ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ 15,425 ಮಹಿಳೆಯರು, 15,439 ಪುರುಷರು, 12 ಇತರೆ ಮತದಾರರಿದ್ದು, ಒಟ್ಟು 30,876 ಜನ ಹಕ್ಕು ಚಲಾಯಿಸುವ ಹಕ್ಕು ಪಡೆದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 23, ಬಿಎಸ್‍ಪಿ 1, ಒಂಬತ್ತು ಜನ ಪಕ್ಷೇತರರು ಸೇರಿದಂತೆ ಒಟ್ಟು 56 ಮಂದಿ ಕಣದಲ್ಲಿದ್ದಾರೆ.

ಬೆಳ್ಳಿ ಲೋಟ, ತಟ್ಟೆ ಹಂಚಿದ ಆರೋಪ:

ಪಟ್ಟಣದ 11ನೇ ವಾರ್ಡಿನಲ್ಲಿ ಮತದಾರರಿಗೆ ಆಮಿಷವೊಡ್ಡಲು ಬೆಳ್ಳಿ ದೀಪ, ನಾಣ್ಯ, ಲೋಟ ಹಂಚಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಆಲ್ದಳ್ಳಿಯವರು ಮಂಗಳವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಆರೋಪಿಸಿದ್ದರು. ಆದರೆ, ಅವರ ಆರೋಪ ಸತ್ಯಕ್ಕೆ ದೂರವಾದುದು ಎಂದು ತಹಶೀಲ್ದಾರ್‌ ಸ್ಪಷ್ಟಪಡಿಸಿದರು.

‘ಸಾಗರ್ ಬೇಕರಿಯ ಹಿಂದೆ ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂತಹದ್ದೇನೂ ಕಂಡು ಬಂದಿಲ್ಲ’ ಎಂದು ತಹಶೀಲ್ದಾರ್‌ ಎಚ್‌.ಜೆ. ರಶ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT