7

ಹಂಪಿಯಲ್ಲಿ ಪುಷ್ಕರಣಿ ಪತ್ತೆ

Published:
Updated:
ಹಂಪಿಯಲ್ಲಿ ಭಾನುವಾರ ಪತ್ತೆಯಾಗಿರುವ ಪುಷ್ಕರಣಿ

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಭಾನುವಾರ ಪುಷ್ಕರಣಿ ಪತ್ತೆಯಾಗಿದೆ.

ಮಧ್ಯಮ ಗಾತ್ರದ ಪುಷ್ಕರಣಿಯ ಸುತ್ತಲೂ ಸುಂದರ ಕೆತ್ತನೆಯ ಬಂಡೆಗಲ್ಲುಗಳಿವೆ. ಒಂದು ಕಡೆ ನಂದಿ ಸ್ಮಾರಕವಿದೆ. ಪುಷ್ಕರಣಿಯ ಒಳಗೆ ಇಳಿಯಲು ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ. ‘ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ನೆಲವನ್ನು ಸಮತಟ್ಟುಗೊಳಿಸಿ, ಹಾಸುಗಲ್ಲುಗಳನ್ನು ಸೂಕ್ತ ರೀತಿಯಲ್ಲಿ ಹಾಕಲಾಗುತ್ತಿತ್ತು. ಈ ವೇಳೆ ಸುಂದರ ಕೆತ್ತನೆಯ ಕಲ್ಲುಗಳು ಪತ್ತೆಯಾಗಿವೆ. ಸೂಕ್ಷ್ಮವಾಗಿ ನೆಲವನ್ನು ಅಗೆಯುತ್ತ ಹೋದಂತೆ ಪುಷ್ಕರಣಿ ಪತ್ತೆಯಾಯಿತು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಹಂಪಿ ವೃತ್ತದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಪಿಯ ನೆಲಸ್ತರ ಶಿವ ದೇವಾಲಯ, ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಹಲವೆಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ ರಾಣಿಸ್ನಾನ ಗೃಹದ ಬಳಿ ವಿಜಯನಗರ ಕಾಲದ ಪೈಪ್‌ಲೈನ್‌ ವ್ಯವಸ್ಥೆ ಪತ್ತೆಯಾಗಿತ್ತು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !