ಮಂಗಳವಾರ, ಸೆಪ್ಟೆಂಬರ್ 27, 2022
27 °C

ರಸ್ತೆಯೇ ಬಿಡಾಡಿ ದನಗಳ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ವಿವಿಧ ಮುಖ್ಯರಸ್ತೆಗಳೇ ಬಿಡಾಡಿ ದನಗಳ ತಾಣವಾಗಿ ಮಾರ್ಪಟ್ಟಿದೆ.

ನಡು ರಸ್ತೆಯಲ್ಲೇ ಬಿಡಾಡಿ ದನಗಳು ಬೀಡು ಬಿಟ್ಟಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ನಗರಸಭೆ ಪ್ರಕಟಣೆ ಹೊರಡಿಸಿ, ದನಗಳನ್ನು ರಸ್ತೆಗೆ ಬಿಟ್ಟರೆ ಗೋಶಾಲೆಗಳಿಗೆ ಸಾಗಿಸಲಾಗುವುದು. ಮಾಲೀಕರು ಅವುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿತ್ತು. ಆದರೆ, ಅದು ಎಚ್ಚರಿಕೆಗಷ್ಟೇ ಸೀಮಿತವಾಗಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ರಸ್ತೆಯ ಎಲ್ಲೆಂದರಲ್ಲಿ ಬಿಡಾಡಿ ದನಗಳು ಓಡಾಡುವುದರಿಂದ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಭಯದಲ್ಲಿ ಓಡಾಡುವಂತಾಗಿದೆ. ಇದು ಅಪಘಾತಕ್ಕೂ ಎಡೆಮಾಡಿಕೊಟ್ಟಿದೆ. ಕೂಡಲೇ ನಿಯಂತ್ರಿಸಲು ಕ್ರಮ ಜರುಗಿಸಬೇಕು.

–ಬಸವರಾಜ, ಚನ್ನಪ್ಪ, ಸ್ಥಳೀಯ ನಿವಾಸಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.