ಎಸ್‌ಯುಸಿಐಸಿ ಅಭ್ಯರ್ಥಿ ದೇವದಾಸ್ ಮಾ.28ರಂದು ನಾಮಪತ್ರ

ಶುಕ್ರವಾರ, ಏಪ್ರಿಲ್ 26, 2019
34 °C

ಎಸ್‌ಯುಸಿಐಸಿ ಅಭ್ಯರ್ಥಿ ದೇವದಾಸ್ ಮಾ.28ರಂದು ನಾಮಪತ್ರ

Published:
Updated:

ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿ ಎಸ್‌ಯುಸಿಐಸಿ ಅಭ್ಯರ್ಥಿಯಾಗಿ ಎ.ದೇವದಾಸ್ ಸ್ಪರ್ಧಿಸಲಿದ್ದಾರೆ.  ಮಾರ್ಚ್ ೨೮ ರಂದು ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್ ತಿಳಿಸಿದರು.
 
ಪಕ್ಷವು ಕಲಬುರಗಿ, ರಾಯಚೂರು, ಯಾದಗಿರಿ, ದಾವಣಗೆರೆ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿ ಏಳು ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ನಗರದಲ್ಲಿ‌ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಮೂವತ್ತು‌ ವರ್ಷಗಳಿಂದ ದೇವದಾಸ್  ಜಿಲ್ಲೆಯಲ್ಲಿ‌ ಜನಪರ ಹೋರಾಟಗಳಲ್ಲಿ ನಿರಂತರ ಪಾಲ್ಗೊಂಡಿದ್ದಾರೆ. 2014ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು ಎಂದರು.

ಕಾಂಗ್ರೆಸ್ ಬಿಜೆಪಿ ಮತ್ತು‌ ಒಂದೇ ನಾಣ್ಯದ ಎರಡು ಮುಖಗಳಂತೆ. ಕಾಂಗ್ರೆಸ್ ಸುಮಾರು ‌ಆರು ದಶಕಗಳ ಕಾಲ ಆಡಳಿತ ನಡೆಸಿದರೂ ದೇಶ‌ ಅಭಿವೃದ್ಧಿ ಕಾಣಲಿಲ್ಲ. ಆದರೆ ಇಂದು ಅದೇ ಪಕ್ಷವನ್ನು ಬಿಜೆಪಿಗೆ ಪರ್ಯಾಯ ಎಂದು ‌ಬಿಂಬಿಸುತ್ತಿರುವುದು‌‌ ವಿಷಾದನೀಯ ಎಂದರು.

ಮುಖಂಡರಾದ ಶಾಂತಾ, ಮಂಜುಳಾ, ರಾಧಾಕೃಷ್ಣ‌ ಉಪಾಧ್ಯ, ಅಭ್ಯರ್ಥಿ ದೇವದಾಸ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !