10 ದಿನ ಪೂರೈಸಿದ ಟಾಸ್ಕ್ ವರ್ಕ್ ನೌಕರರ ಮುಷ್ಕರ!

7

10 ದಿನ ಪೂರೈಸಿದ ಟಾಸ್ಕ್ ವರ್ಕ್ ನೌಕರರ ಮುಷ್ಕರ!

Published:
Updated:
Deccan Herald

ಬಳ್ಳಾರಿ: ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಕರೆದಿರುವ ಟೆಂಡರನ್ನು ರದ್ದುಗೊಳಿಸಿ ನೇರವಾಗಿ ವೇತನ ಪಾವತಿಸಬೇಕು ಎಂದು ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಟಾಸ್ಕ್ ವರ್ಕ್‌ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಮುಷ್ಕರ ಬುಧವಾರ ಹತ್ತು ದಿನವನ್ನು ಪೂರೈಸಿತು.

‘ಇದುವರೆಗೂ ಯಾವುದೇ ಅಧಿಕಾರಿ ಸೌಜನ್ಯಕ್ಕಾದರೂ ಬಂದು ನಮ್ಮನ್ನು ಭೇಟಿಯಾಗಿಲ್ಲ’ ನಮ್ಮ ಎಂದು ಸಂಘದ ಗೌರವಾಧ್ಯಕ್ಷ ಪಂಪಾಪತಿ ಆಗ್ರಹಿಸಿದರು.

‘ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿರುವ ಕಡತಕ್ಕೆ ಅನುಮೋದನೆ ನೀಡಿ, ಕಾರ್ಮಿಕರು ನಿರ್ವಹಿಸುವ ಹುದ್ದೆಗೆ ಅನುಗುಣವಾಗಿ ಕನಿಷ್ಠ ವೇತನ ನೀಡಬೇಕು. ಏಪ್ರಿಲ್‌ನಿಂದ ಬಾಕಿ ಇರುವ ವೇತನವನ್ನು ಪಾವತಿಸಬೇಕು. ಸೇವಾ ನಿಯಮ ಬಾಹಿರವಾಗಿ ಅವಧಿ ಮೀರಿ ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು’ ಎಂದು ಆಗ್ರಹಿಸಿದರು.

‘ಮುನಿರಾಬಾದ್ ವೃತ್ತದ ಕಾರ್ಮಿಕರ 45 ದಿನ ಮುಷ್ಕರದ ಅವಧಿಯ ವೇತನವನ್ನು ಭರಿಸಬೇಕು. ಸೇವಾ ಭದ್ರತೆ ಒದಗಿಸಿ, ಗುತ್ತಿಗೆ ಕಾರ್ಮಿಕ ಸಲಹಾ ಮಂಡಳಿಗೆ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !