ಶನಿವಾರ, ಆಗಸ್ಟ್ 24, 2019
27 °C
ಹಂಪಿ ವಿರೂಪಾಕ್ಷ ದೇಗುಲದ ಹುಂಡಿ ಹಣ ಎಣಿಕೆ

ಮೂರು ತಿಂಗಳಲ್ಲಿ ₹14 ಲಕ್ಷ ಸಂಗ್ರಹ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಐದು ಹುಂಡಿಗಳಲ್ಲಿ ಮೂರು ತಿಂಗಳಲ್ಲಿ ಸಂಗ್ರಹವಾದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಒಟ್ಟು ₹14,29,220 ಸಂಗ್ರಹವಾಗಿದೆ.

ವಿರೂಪಾಕ್ಷ ಸ್ವಾಮಿಯ ಐದು, ಭುವನೇಶ್ವರಿ, ಪಾರ್ವತಿ, ದುರ್ಗಾದೇವಿ ಹಾಗೂ ನವಗ್ರಹದ ತಲಾ ಒಂದು ಹುಂಡಿಯಲ್ಲಿ ಏಪ್ರಿಲ್‌ 16ರಿಂದ ಆ. 2ರ ವರೆಗೆ ಸಂಗ್ರಹವಾದ ಹುಂಡಿಗಳನ್ನು ಶುಕ್ರವಾರ ತೆರೆಯಲಾಯಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ, ವಿರೂಪಾಕ್ಷ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ಅವರ ಸಮ್ಮುಖದಲ್ಲಿ ಹಣ ಎಣಿಸಲಾಯಿತು. ₹2,000 ಮೌಲ್ಯದ 13, ₹500 ಮೊತ್ತದ 525 ಹಾಗೂ ₹200 ಬೆಲೆಯ 218, ₹100ರ 3,883 ನೋಟುಗಳು ಒಳಗೊಂಡಂತೆ ಚಿಲ್ಲರೆ ಹಣ ಭಕ್ತರು ಹುಂಡಿಗೆ ಹಾಕಿದ್ದಾರೆ.

Post Comments (+)