ಗುರುವಾರ , ಆಗಸ್ಟ್ 11, 2022
24 °C

ಭರ್ತಿಯಾದ ನಾರಿಹಳ್ಳ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಡೂರು: ತಾಲ್ಲೂಕಿನ ತಾರಾನ ಗರದ ಬಳಿಯಲ್ಲಿ ನಾರಿಹಳ್ಳಕ್ಕೆ ನಿರ್ಮಿಸ ಲಾಗಿರುವ ಜಲಾಶಯವು ಶುಕ್ರವಾರ ಭರ್ತಿಯಾಗಿದೆ.

ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 0.81 ಟಿ.ಎಂ.ಸಿ ಅಡಿ. ‘ಜಲಾಶಯ ಭರ್ತಿಯಾದ ಕಾರಣ ಶುಕ್ರವಾರ ಜಲಾಶಯದ ಒಂದು ಗೇಟಿನ ಮೂಲಕ ನೀರನ್ನು ಹೊರಬಿಡಲಾಯಿತು. ಜಲಾಶಯದ ಒಳಹರಿವು ನೋಡಿಕೊಂಡು ನೀರು ಹರಿಸುವಿಕೆ ತೀರ್ಮಾನಿಸಲಾಗುವುದು’ ಎಂದು ನಾರಿಹಳ್ಳ ಜಲಾಶಯದ ಸಹಾಯಕ ಎಂಜಿನಿಯರ್ ಪಿ.ವಿ.ಕೃಷ್ಣ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 14ರಷ್ಟು ಹೆಚ್ಚು ಮಳೆಯಾಗಿದ್ದು, ದಶಕದ ನಂತರ ನಾರಿಹಳ್ಳ ಜಲಾಶಯವು ಭರ್ತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು