ಬುಧವಾರ, ಮೇ 18, 2022
25 °C

ಬೈಕ್ ಕಳವು: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು: ಮೋಟಾರ್ ಬೈಕ್ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟೂರು ಪಟ್ಟಣದ ನಿವಾಸಿಯಾಗಿದ್ದ, ಸದ್ಯ ದಾವಣಗೆರೆಯಲ್ಲಿ ವಾಸವಿದ್ದ ಹನುಮಂತಪ್ಪ(30) ಬಂಧಿತ ಆರೋಪಿ. ಆರೋಪಿಯಿಂದ ಆಂಧ್ರಪ್ರದೇಶ ಹಾಗೂ ಹೊಸಪೇಟೆಯಲ್ಲಿ ಕಳ್ಳತನವಾಗಿದ ಸುಮಾರು ₹ 60 ಸಾವಿರ ಬೆಲೆ ಬಾಳುವ ಎರಡು ಮೋಟಾರ್ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ಮುರುಗೇಶ ನೇತೃತ್ವದಲ್ಲಿ ಪಿಎಸ್ಐ ಎಚ್ ನಾಗಪ್ಪ, ಕಾನ್ಸ್‌ಟೇಬಲ್ ವಿ ಮಂಜಪ್ಪ, ಬಸವರಾಜ್, ರೇವಣರಾಧ್ಯ ಕಾರ್ಯಾಚರಣೆ ನಡೆಸಿದ್ದಾರೆ. ಯಶಸ್ವಿ ಕಾರ್ಯಚರಣೆ ನಡೆಸಿದ ತಂಡಕ್ಕೆ ವಿಜಯನಗರ ಎಸ್ಪಿ ಡಾ.ಕೆ ಅರುಣ್ ಶ್ಲಾಘಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.