ಗುರುವಾರ , ಮೇ 6, 2021
31 °C

ಆಕಾಶ್‌ ಶಾಲೆ ವೆಬ್‌ಸೈಟ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಚಿತ್ತವಾಡ್ಗಿಯ ಹಳೆ ಅಮರಾವತಿ ರಸ್ತೆಯ ಆಕಾಶ್ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯ ವೆಬ್‌ಸೈಟ್‌ ಉದ್ಘಾಟನಾ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

ವೆಬ್‌ಸೈಟ್‌ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ‘2019ನೇ ಸಾಲಿನಲ್ಲಿ ಶಾಲೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 2020ರಲ್ಲಿ ಕೋವಿಡ್‌ ಬಂದರೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು ಎಂದು ಕೆಲಸ ಪೂರ್ಣಗೊಳಿಸಲಾಯಿತು. ಎಲ್‌.ಕೆ.ಜಿಯಿಂದ ಪಿಯುಸಿ ವರೆಗೆ ಶಾಲೆಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ’ ಎಂದು ಹೇಳಿದರು.

ಮುಖಂಡರಾದ ಸಿದ್ದನಗೌಡ, ಅರಳಿ ಕೊಟ್ರಪ್ಪ, ಎಂ.ಸಿ. ವೀರಸ್ವಾಮಿ, ಎಚ್.ವಿ. ಶರಣು ಸ್ವಾಮಿ, ರವಿಶಂಕರ್‌, ತಾರಿಹಳ್ಳಿ ಹನುಮಂತಪ್ಪ, ಶಮ್‌ಶುಲ್ಲಾ ಖಾನ್‌, ಅಶ್ವನ್‌ ಕೊತ್ತಂಬರಿ, ಸೈಯದ್‌ ನಾಜಿಮುದ್ದೀನ್‌, ಪ್ರಾಂಶುಪಾಲ ಮಹೇಶ, ವಿಜಯಕುಮಾರ್‌, ವೆಂಕಟೇಶ್‌, ಅಯೂಬ್‌ ಖಾನ್‌, ಶಿರೀಷಾ, ಕ್ಷಮಾ, ನಫೀಸಾ ಅಜ್ಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.