ಬುಧವಾರ, ಆಗಸ್ಟ್ 21, 2019
27 °C

ಪ್ರವಾಹ ಸಂತ್ರಸ್ತರಿಗೆ 10 ಸಾವಿರ ಬೆಡ್‌ಶೀಟ್‌

Published:
Updated:

ಬೆಂಗಳೂರು: ಪ್ರವಾಹ ಸಂತ್ರಸ್ತ ಉತ್ತರ ಕರ್ನಾಟಕದ ಭಾಗಕ್ಕೆ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ವೇದಿಕೆ ಮತ್ತು ಬೆಂಗಳೂರು ರೈಲ್ವೆ ವಿಭಾಗದಿಂದ 3 ಸಾವಿರ ಹೊದಿಕೆ ಮತ್ತು 10 ಸಾವಿರ ಬೆಡ್‌ಶೀಟ್‌ಗಳನ್ನು ಶುಕ್ರವಾರ ಕಳುಹಿಸಲಾಯಿತು.

ಕುಡಿಯುವ ನೀರು, ಬಿಸ್ಕೇಟ್, ಟೀ ಪುಡಿ, ಹಾಲಿನ ಪುಡಿ, ಸಾಬೂನು, ಟೂತ್ ಪೇಸ್ಟ್, ಟೂತ್ ಬ್ರಷ್ ಮತ್ತು ಔಷಧಗಳನ್ನು ರೈಲಿನಲ್ಲಿ ಹುಬ್ಬಳ್ಳಿಗೆ ಕಳುಹಿಸಿತು. ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರು ಮತ್ತು ರೈಲ್ವೆ ನೌಕರರಿಂದ ರೈಲ್ವೆ ವಿಭಾಗದ ಸ್ಕೌಟ್ ಆ್ಯಂಡ್ ಗೈಡ್ಸ್‌ ವಿದ್ಯಾರ್ಥಿಗಳು ₹63,700 ಸಂಗ್ರಹಿಸಿದರು.

₹15 ಲಕ್ಷ ನೆರವು ನೀಡಿದ ಪೇಜಾವರ ಮಠ

ಮೈಸೂರು: ರಾಜ್ಯದ ವಿವಿಧೆಡೆ ನೆರೆ ಪರಿಸ್ಥಿತಿಯಿಂದ ಸಂತ್ರಸ್ತರಾದವರಿಗೆ ಉಡುಪಿ ಪೇಜಾವರ ಮಠದಿಂದ ₹ 15 ಲಕ್ಷ ನೆರವು ನೀಡಲಾಗುವುದು ಎಂದು ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಧಾರಾಕಾರ ಮಳೆ ಹಾಗೂ ನೆರೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂತ್ರಸ್ತರ ನೆರವಿಗೆ ಎಲ್ಲರೂ ಸಹಾಯಹಸ್ತ ಚಾಚಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

Post Comments (+)