ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13, 14ರಂದು ‘ನಮ್ಮೂರ ಹಬ್ಬ’

Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕರಾವಳಿ ಭಾಗದ ಸಂಸ್ಕೃತಿ, ಆಚರಣೆಗಳನ್ನು ಪ್ರಚುರಪಡಿಸಲು ಜಯನಗರದ ಚಂದ್ರಗುಪ್ತ ಕ್ರೀಡಾಂಗಣದಲ್ಲಿ ಫೆ.13, 14 ರಂದು ‘ನಮ್ಮೂರ ಹಬ್ಬ-2016’  ಉತ್ಸವ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪರವಾಗಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ‘ಉತ್ಸವದಲ್ಲಿ  ಕರಾವಳಿ ಯಕ್ಷಗಾನ, ಬಯಲಾಟ, ಜೀವನ ಶೈಲಿ ಮತ್ತು ಖಾದ್ಯಗಳ ವೈವಿಧ್ಯತೆಯನ್ನು ನಗರದ ಜನರಿಗೆ ಪರಿಚಯಿಸಲಾಗುವುದು’ ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎನ್.ನರಸಿಂಹ ಮಾತನಾಡಿ, ‘ಉತ್ಸವದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, 200ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಲಿದ್ದಾರೆ.  ಈ ವರ್ಷ ಹುಲಿ ಕುಣಿತ ವಿಶೇಷವಾಗಿದ್ದು, ನಟಿ ಶುಭ ಪೂಂಜಾ ಉತ್ಸವದ ರಾಯಭಾರಿಯಾಗಿದ್ದಾರೆ’ ಎಂದರು.

ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ‘ಟ್ರಸ್ಟ್‌ ಪ್ರತಿ ವರ್ಷ ನೀಡುವ ‘ಕಿರೀಟ‘ ಪ್ರಶಸ್ತಿಗೆ ಕ್ರೀಡಾಪಟು ಮಾಲತಿ ಕೃಷ್ಣಮೂರ್ತಿ ಹೊಳ್ಳ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ‘ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ’ಕ್ಕೆ  ಪ್ರಶಸ್ತಿ ನೀಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT