ಶನಿವಾರ, ಆಗಸ್ಟ್ 17, 2019
27 °C

ಜೂಜಾಟ ನಿರತ 18 ಮಂದಿ ಬಂಧನ: ₹ 9.42 ಲಕ್ಷ ವಶ

Published:
Updated:

ಬೆಂಗಳೂರು: ನಗರದ ಕೆ.ಎಚ್‌. ರಸ್ತೆಯಲ್ಲಿರುವ ಮೆಗಾ ಟವರ್‌ನಲ್ಲಿರುವ ಫೋರ್‌ ರಿಕ್ರಿಯೇಷನ್‌ ಕ್ಲಬ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಜೂಜಾಟದಲ್ಲಿ ನಿರತರಾಗಿದ್ದ 18 ಮಂದಿಯನ್ನು ಬಂಧಿಸಿ ₹ 9.42 ಲಕ್ಷ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಕ್ಲಬ್‌ಗೆ ಪಂಟರುಗಳನ್ನು ಕರೆದುಕೊಂಡು ಲಕ್ಷಾಂತರ ರೂಪಾಯಿ ಪಣ ಇಟ್ಟು ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ಕ್ಲಬ್‌ ಮಾಲೀಕರಾದ ಸುರೇಶ್‌, ಕೃಷ್ಣ ರಾವ್‌, ಸುನೀಲ್‌ ಮತ್ತು ದಾಳಿ ವೇಳೆ ತಲೆಮರೆಸಿಕೊಂಡಿರುವ ಹನೀಫ್‌, ಪಂಟರ್‌ಗಳನ್ನು ಕರೆಸಿಕೊಂಡು ನಗರದ ಬಲ್ಲಾಳ್‌ ರೆಸಿಡೆನ್ಸಿ ಮತ್ತು ಇತರ ಹೋಟೆಲ್‌ಗಳಲ್ಲಿ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದರು. ಬಳಿಕ ಕ್ಲಬ್‌ನಲ್ಲಿ ಜೂಜಾಟಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಅಲ್ಲದೆ, ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಟ್ಟು, ಜೂಜಾಟದಲ್ಲಿ ತೊಡಗಿದ್ದವರಿಗೆ ಪೂರೈಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

 

Post Comments (+)