ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷ: ₹91.32 ಲಕ್ಷ ಬಾಡಿಗೆ ಬಾಕಿ

Last Updated 29 ಅಕ್ಟೋಬರ್ 2017, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿರುವ ಬಿಬಿಎಂಪಿ ಸಂಕೀರ್ಣದ 32 ಮಳಿಗೆಗಳ ಮಾಲೀಕರು 20 ವರ್ಷಗಳಿಂದ ಬಾಡಿಗೆ ನೀಡಿಲ್ಲ. ಒಟ್ಟು ₹91.32 ಲಕ್ಷ ಬಾಡಿಗೆ ಬರಬೇಕಿದೆ.

ಬಾಡಿಗೆದಾರರ ಸಭೆ ನಡೆಸಿದ್ದ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಏಪ್ರಿಲ್‌ನೊಳಗೆ ಬಾಡಿಗೆ ಪಾವತಿಸುವಂತೆ ಸೂಚಿಸಿದ್ದರು. ಈ ಸಂಬಂಧ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಯಾರೂ ಬಾಡಿಗೆ ಪಾವತಿಸಿರಲಿಲ್ಲ. ಹೀಗಾಗಿ ಮಳಿಗೆಗಳಿಗೆ ಬೀಗ ಹಾಕಿದ್ದರು.

ಜುಲೈ ಅಂತ್ಯದೊಳಗೆ ಬಾಡಿಗೆ ಪಾವತಿಸುವುದಾಗಿ ವ್ಯಾಪಾರಿಗಳು ಮನವಿ ಮಾಡಿದ್ದರು. ಹೀಗಾಗಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೂ ಬಹುತೇಕರು ಬಾಡಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಇಲ್ಲಿ ಚದರ ಅಡಿಗೆ ₹17 ಬಾಡಿಗೆ ನಿಗದಿಪಡಿಸಲಾಗಿದೆ. ತಿಂಗಳಿಗೆ ₹1,700ರಿಂದ ₹2,500 ಬಾಡಿಗೆ ನಿಗದಿಯಾಗಿದೆ. 1998ರಿಂದಲೂ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಿಲ್ಲ.

‘ಬಾಕಿ ಬಾಡಿಗೆ ಪಾವತಿಗೆ ಮೂರು ತಿಂಗಳ ಗಡುವು ನೀಡಿದ್ದೇವೆ. ಒಂದು ವೇಳೆ ಕಟ್ಟದಿದ್ದರೆ ಮಳಿಗೆಗಳಿಗೆ ಬೀಗ ಜಡಿಯುತ್ತೇವೆ. ಬಾಕಿ ಹಣ ಪಾವತಿಯಾದ ತಕ್ಷಣ ಹೊಸದಾಗಿ ಟೆಂಡರ್‌ ಕರೆಯುತ್ತೇವೆ. ದರ ಪರಿಷ್ಕರಣೆಯನ್ನೂ ಮಾಡುತ್ತೇವೆ’ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದರು.

ತಿಂಗಳಿಗೆ ₹1.10 ಲಕ್ಷ ವಿದ್ಯುತ್‌ ಬಿಲ್‌
ಸಂಕೀರ್ಣದ ವಿದ್ಯುತ್ ಬಿಲ್ ತಿಂಗಳಿಗೆ ಸರಾಸರಿ ₹1.10 ಲಕ್ಷ ಬರುತ್ತಿದೆ. ಮಳಿಗೆಗಳಿಗೆ ಪ್ರತ್ಯೇಕ ಮೀಟರ್ ಅಳವಡಿಸದ ಕಾರಣ, ವಿದ್ಯುತ್ ಬಿಲ್ ಅನ್ನು ಪಾಲಿಕೆಯೇ ಭರಿಸುತ್ತಿದೆ. ‘ಮಳಿಗೆಗಳಿಗೆ ಪ್ರತ್ಯೇಕ ಮೀಟರ್‌ ಅಳವಡಿಸುತ್ತೇವೆ’ ಎಂದು ವೀರಭದ್ರಸ್ವಾಮಿ ತಿಳಿಸಿದರು.

*
ದೀರ್ಘಕಾಲದಿಂದ ಬಾಡಿಗೆ ವಸೂಲಿ ಮಾಡದಿರುವುದು ತಪ್ಪು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸುತ್ತೇನೆ.
– ಎನ್‌. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT