ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಜನರಿಗೆ ಉಚಿತ ಟಿಕೆಟ್

Last Updated 29 ಫೆಬ್ರುವರಿ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಅತೀ ಹೆಚ್ಚು ಬಳಸಿಕೊಂಡು ಸಂಚಾರ ಮಾಡಿದ ಕೇರಳದ ಟೆಕಿ ಸೇರಿ 34 ಜನರಿಗೆ ಸಂಸ್ಥೆ ಉಚಿತ ಟಿಕೆಟ್ ನೀಡಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕಿ ಸಗೀನ್ ಅವರು 2019ನೇ ಸಾಲಿನಲ್ಲಿ ಕೇರಳದ ಎರ್ನಾಕುಲಂಗೆ 148 ಆಸನಗಳನ್ನು ಕಾಯ್ದಿರಿಸಿದ್ದರು. ಪ್ರಯಾಣಕ್ಕೆ ₹1.78 ಲಕ್ಷವನ್ನು ಅವರು ಖರ್ಚು ಮಾಡಿದ್ದರು. ಪಿ. ಕೃಷ್ಣ ಪ್ರಸಾದ್ ಎಂಬುವರು ತ್ರಿಶೂರಿಗೆ 129 ಆಸನಗಳನ್ನು ಕಾಯ್ದಿರಿಸಿ ₹1.37 ಲಕ್ಷ, ಬಿ. ನರಸಿಂಹಪ್ರಭು ಅವರು ಪಣಜಿಗೆ 125 ಆಸನ ಕಾಯ್ದಿರಿಸಿ ₹1.24 ಲಕ್ಷವನ್ನು ಪ್ರಯಾಣಕ್ಕೆ ಖರ್ಚು ಮಾಡಿದ್ದರು.

ಒಟ್ಟು 34 ಜನರನ್ನು ಕೆಎಸ್‌ಆರ್‌ಟಿಸಿ ಅಭಿನಂದನೆ ಸಲ್ಲಿಸಿದ್ದು, ಅಷ್ಟು ಜನರು ತಾವು ಬಯಸುವ ಒಂದು ಸ್ಥಳಕ್ಕೆ ಹೋಗಿ ಬರಲು ಉಚಿತ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT