ಬೆಂಗಳೂರು: ನಮ್ಮ ದೇಶದ ದೊಡ್ಡ ಸಮಸ್ಯೆ ಎಂದರೆ ವೈದಿಕ ಜನಾಂಗ. ಅವರು ವೈದಿಕ ಸಿದ್ಧಾಂತವನ್ನು ಜನಸಮುದಾಯದ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಆರೋಪಿಸಿದರು.

ಶುಕ್ರವಾರ ಇಲ್ಲಿ ನಡೆದ ‘ಭೀಮಾ– ಕೋರೆಗಾಂವ್ ಕದನ ಸ್ಮರಣೆ: ಅಂದು ಮತ್ತು ಇಂದು’ ಸಂವಾದದಲ್ಲಿ ಮಾತನಾಡಿದರು.

‘ಕೋರೆಗಾಂವ್ ಸಂಘರ್ಷ ವೈದಿಕ ನಡೆಯ ವಿರುದ್ಧದ ಆರಂಭ. ಇದು ಒಂದು ಮಾದರಿ ಎಂದು ಭಾವಿಸುತ್ತೇವೆ. ನಾವು ಬ್ರಾಹ್ಮಣರ ವಿರುದ್ಧ ಅಲ್ಲ. ಆದರೆ, ವೈದಿಕರು ನಮ್ಮವರಲ್ಲ. ಅವರನ್ನು ಬುಡಸಮೇತ ಕೀಳುವವರೆಗೆ ಹೋರಾಟ ಬಿಡುವುದಿಲ್ಲ’ ಎಂದರು.

‘200 ವರ್ಷಗಳಿಂದ ವಿಜಯೋತ್ಸವ ನಡೆಯುತ್ತಿದೆ. ಆದರೆ, ಈ ಬಾರಿ ಮಾತ್ರ ಗಲಭೆ ಆಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದು ಇದಕ್ಕೆ ಕಾರಣ. ಬಿಜೆಪಿಯಲ್ಲಿ ಇರುವವರೆಲ್ಲ ವೈದಿಕರಲ್ಲ. ಬಿಜೆಪಿ ಸರ್ಕಾರದ ಆಸರೆಯಲ್ಲಿ ವೈದಿಕ ಜನಾಂಗವು ಸಮಾಜವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ಪತ್ರಕರ್ತ ಹಿಂದೂಧರ ಹೊನ್ನಾಪುರ, ‘ಅಂಬೇಡ್ಕರ್ ಹೆಸರಿನಲ್ಲಿದ್ದ ಸಂಶೋಧನಾ ಕೇಂದ್ರಗಳನ್ನು ಕೇಂದ್ರ ಸರ್ಕಾರ ಮುಚ್ಚುತ್ತಿದೆ. ಅವರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ನಮ್ಮ ಕಣ್ಣಿಗೆ ಮಣ್ಣೆರಚುತ್ತಿದೆ. ನಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಕೋರೆಗಾಂವ್ ವಿಜಯೋತ್ಸವದ ಗಲಭೆ ನಮ್ಮ ರಾಜಕೀಯ ಮುನ್ನೋಟ ಬದಲಾಯಿಸುವ ದೊಡ್ಡ ಉದಾಹರಣೆಯಾಗಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.