ಚಿತ್ರಕಲೆ ಪ್ರಭಾವಿ ಮಾಧ್ಯಮ

7

ಚಿತ್ರಕಲೆ ಪ್ರಭಾವಿ ಮಾಧ್ಯಮ

Published:
Updated:

ಬೆಂಗಳೂರು: ಚಿತ್ರಕಲೆಯಲ್ಲಿ ಸಾಮಾಜಿಕ ಕಳಕಳಿಯು ಮಿಳಿತಗೊಂಡರೆ ಕಲೆಯ ಸೊಬಗು ಮತ್ತಷ್ಟು ಹೆಚ್ಚುತ್ತದೆ ಎಂದು ಕಲಾವಿದ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಗಣಪತಿ ಎಸ್. ಹೆಗಡೆ ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ಹಮ್ಮಿಕೊಂಡಿದ್ದ ಕಲಾವಿದ ಗುರುಸ್ವಾಮಿ ಬಿ.ವಿ. ವಿರಚಿತ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, 'ಚಿತ್ರಕಲೆಯು ಒಂದು ಪ್ರಭಾವಿ ಮಾಧ್ಯಮ. ಸಮಾಜದ ಓರೆ ಕೋರೆಗಳನ್ನು ಜನತೆಗೆ ಸಮರ್ಥವಾಗಿ ತಲುಪಿಸುವಲ್ಲಿ ಕಲಾ ಮಾಧ್ಯಮ ಪ್ರಮುಖ ಪಾತ್ರ ವಹಿಸಿದೆ' ಎಂದರು.

ರೇಖಾ ಚಿತ್ರವು ಕಲೆಯ ಅತ್ಯುತ್ತಮ ಪ್ರಕಾರಗಳಲ್ಲಿ ಒಂದು. ಮುಂಬರುವ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಇದರಿಂದ ರಾಜ್ಯದ ಹಲವು ಪ್ರತಿಭಾವಂತ ಚಿತ್ರಕಲಾವಿದರು ನಾಡಿಗೆ ಪರಿಚಯವಾಗವಾಗಲಿದ್ದಾರೆ ಎಂದು ರಾಜರಾಜೇಶ್ವರಿನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಚ ಹೋ.ಭೊ.ಪುಟ್ಟೇಗೌಡ ಹೇಳಿದರು.

ನಗರದಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳೇ ನನ್ನ ಸಾಮಾಜಿಕ ಸಂದೇಶ ಸಾರುವ ಚಿತ್ರಕಲೆಗೆ ಸ್ಫೂರ್ತಿಯಾಗಿದೆ ಎಂದು ಕಲಾವಿದ ಗುರುಸ್ವಾಮಿ ಬಿ.ವಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry