ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಹಳಿಗಳ ನಡುವೆ ಮಲಗಿ ಚಲಿಸುತ್ತಿದ್ದ ರೈಲಿನಿಂದ ಪಾರಾದ ಮಹಿಳೆ!

Published 29 ಆಗಸ್ಟ್ 2023, 9:57 IST
Last Updated 29 ಆಗಸ್ಟ್ 2023, 9:57 IST
ಅಕ್ಷರ ಗಾತ್ರ

ಹೆಸರಘಟ್ಟ: ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಅಂಗಾತ ಮಲಗಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡಿರುವ ಘಟನೆ ರಾಜಾನುಕುಂಟೆ ಬಳಿ ಇತ್ತೀಚೆಗೆ ನಡೆದಿದೆ. ಸದ್ಯ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ರಾಜನುಕುಂಟೆ ಲೆವೆಲ್ ಕ್ರಾಸಿಂಗ್ ರೈಲು ನಿಂತಿದ್ದರಿಂದ, ಸ್ಥಳಿಯ ನಿವಾಸಿಗಳು ರೈಲಿನ ಅಡಿಯಲ್ಲೇ ನುಗ್ಗಿ ಆ ಬದಿಗೆ ತೆರಳುತ್ತಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಲಾರಂಭಿಸಿದೆ. ವಿಚಲಿತರಾಗದ ಮಹಿಳೆ, ರೈಲಿನ ಅಡಿಯಲ್ಲಿ ಅಂಗಾತ ಮಲಗಿದ್ದಾರೆ. ರೈಲು ಸಾಗಿ ಹೋದ ನಂತರ ಎದ್ದು ಬಂದಿದ್ದಾರೆ. ರಾಜಾನುಕುಂಟೆಯಲ್ಲಿ ನಾಗರಿಕರು ನಿತ್ಯ ಅನುಭವಿಸುತ್ತಿರುವ ಈ ಸಮಸ್ಯೆಗೆ ಮುಕ್ತಿ ಯಾವಾಗ ಎಂದು ಸ್ಥಳಿಯರು ಪ್ರಶ್ನೆ ಮಾಡಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT