ಗುರುವಾರ , ಆಗಸ್ಟ್ 18, 2022
23 °C

ಆದಿಚುಂಚನಗಿರಿ ಮಠದಿಂದ ಕೋವಿಡ್ ಆರೈಕೆ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನಗರದ ವಿಜಯನಗರದ ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿದೆ.

ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸೌಮ್ಯನಾಥ ಸ್ವಾಮೀಜಿಯವರು ಈ ಕೇಂದ್ರವನ್ನು ಭಾನುವಾರ ಉದ್ಘಾಟಿಸಿದರು.

ಈ ಕೇಂದ್ರದಲ್ಲಿ ನುರಿತ ತಜ್ಞರಿದ್ದು ಸೋಂಕಿತರಿಗೆ ಪ್ರತಿದಿನ ತಪಾಸಣೆ ನಡೆಸಿ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ. ಔಷಧಿ, ಹಾಸಿಗೆ ಕೂಡ ಇಲ್ಲಿ ಲಭ್ಯವಿರಲಿದೆ.

ಸೋಂಕಿತರನ್ನು ಉಪಚರಿಸಲು ನುರಿತ ಸಹಾಯಕರು ಇರಲಿದ್ದು, ಪ್ರತಿದಿನ ಯೋಗ, ಪ್ರಾಣಾಯಾಮ ಸೇರಿದಂತೆ ಉತ್ತಮ ಆರೋಗ್ಯಕ್ಕೆ ಅಮೂಲ್ಯವಾದ ಸಲಹೆಗಳನ್ನು ನೀಡುವ ತಂಡ ಕಾರ್ಯನಿರ್ವಹಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು