ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಸುಧಾರಣೆಗೆ ಅಗ್ರಿಟೆಕ್‌ ಸ್ಥಾಪನೆ’

Last Updated 29 ಅಕ್ಟೋಬರ್ 2019, 1:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಕ್ಷೇತ್ರದ ತಾಂತ್ರಿಕ ಸುಧಾರಣೆ ತರುವ ನಿಟ್ಟಿನಲ್ಲಿ ‘ಅಗ್ರಿಟೆಕ್‌’ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಬಾರಿ ಜೈವಿಕ ತಂತ್ರಜ್ಞಾನ ವಿಭಾಗದೊಂದಿಗೆ ಹಲವು ಒಪ್ಪಂದಗಳಾಗಿವೆ. ರಾಜ್ಯದಿಂದ ಪ್ರಾರಂಭವಾದ ಇ-ಮಾರುಕಟ್ಟೆ ಈ ದೇಶವ್ಯಾಪಿ ವಿಸ್ತರಣೆಯಾಗಿದೆ. ರೈತರು ಬೆಳೆದ ಬೆಳೆಯನ್ನು ಎಲ್ಲಿಂದ ಎಲ್ಲಿಗೆ ಬೇಕಾದರೆ ವ್ಯಾಪಾರ ಮಾಡಬಹುದು. ಆನ್‌ಲೈನ್‌ ಟ್ರೇಡಿಂಗ್‌ನಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ’ ಎಂದರು.

‘ರೈತರ ಬೆಳೆಗೆ ಬೆಲೆ ಬರಲು ಸಾಕಷ್ಟು ಆವಿಷ್ಕಾರಗಳು ಆಗಬೇಕು. . ರೈತರು ವ್ಯವಸಾಯದಲ್ಲಿ ಮುಂದುವರಿಯಲು ಅವರ ಆದಾಯ ಹೆಚ್ಚಬೇಕು. ಶೇ 50 ರಷ್ಟು ಜನ ಕೃಷಿಯನ್ನು ಆವಲಂಬಿಸಿಕೊಂಡಿದ್ದು, ಅವರಿಗೆ ಅಲ್ಲೇ ಉದ್ಯೋಗ ಸಿಗಬೇಕಾಗಿದೆ. ಹೀಗಾಗಿರೈತ ಸಮುದಾಯ ತಂತ್ರಜ್ಞಾನದ ಬಳಸಿ ಜೀವನಮಟ್ಟ ಹೆಚ್ಚಿಸಿಕೊಳ್ಳಬೇಕು’ ಎಂದರು.

**

14.50 ಲಕ್ಷ – ಕೃಷಿ ಮೇಳಕ್ಕೆ ಭೇಟಿ ನೀಡಿದವರು

₹5.75 ಕೋಟಿ – ಒಟ್ಟು ವಹಿವಾಟು

**

ಅಂಕಿ ಅಂಶ (ಕೃಷಿ ಮೇಳ 2019)

14.50 ಲಕ್ಷ ; ಕೃಷಿ ಮೇಳಕ್ಕೆ ಭೇಟಿ ನೀಡಿದವರು

₹5.75 ಕೋಟಿ ; ಒಟ್ಟು ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT