‘ಗೋ ರಕ್ಷಿಸಿ ಮತಾಂತರ ತಡೆಯಿರಿ’
‘ಮಹಾಸಭೆ ಕಟ್ಟಡ ನಿರ್ಮಾಣಕ್ಕೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ₹ 5 ಕೋಟಿ ಘೋಷಿಸಿದ್ದರು. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು. ಗೋವುಗಳ ರಕ್ಷಣೆ ಹಾಗೂ ಬಲವಂತದ ಮತಾಂತರ ತಡೆಗೆ ಸರ್ಕಾರ ಆದ್ಯತೆ ನೀಡಬೇಕು. ಬಲವಂತದ ಮತಾಂತರ ತಡೆಯು ದೇಶದ ವೈವಿಧ್ಯತೆಯ ಭಾಗವೂ ಆಗಿದೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಇದಕ್ಕೆ ಸ್ಪಂದಿಸಿದ ದೇಶಪಾಂಡೆ ‘ಮತಾಂತರ ಹಾಗೂ ಗೋಹತ್ಯೆಯ ಬಗ್ಗೆ ಅಧಿವೇಶನದಲ್ಲಿ ನನಗೆ ಸರಿಕಂಡಂತೆ ಹೇಳುತ್ತೇನೆ. ಆ ಸ್ವಾತಂತ್ರ್ಯ ನಮ್ಮ ಪಕ್ಷದಲ್ಲಿದೆ’ ಎಂದರು.