ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಜೊತೆಗಿನ ಫೋಟೊ ತೋರಿಸಿ ವಂಚನೆಗೆ ಯತ್ನ

Last Updated 13 ಜನವರಿ 2023, 20:19 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಫೋಟೊ ಬಳಸಿ ಸೈನಿಕರ ಹೆಸರಿನಲ್ಲಿ ವಂಚನೆಗೆ ಯತ್ನಿಸಲಾಗಿದ್ದು, ಈ ಸಂಬಂಧ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಫೇಸ್‌ಬುಕ್‌ ಪೋಸ್ಟ್‌ ಪ್ರಕಟಿಸಿರುವ ನಗರದ ನಿವಾಸಿ ಎಂ.ಎಸ್. ಪ್ರಸಾದ್, ‘ಭಾರತೀಯ ಸೈನಿಕರ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ. ಇಂಥ ನಕಲಿ ಖಾತೆಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದಿದ್ದಾರೆ.

‘ಮೈಸೂರು ಪಾಕ್‌ ಮಾರಾಟಕ್ಕಾಗಿ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡ ಲಾಗಿತ್ತು. ಸೈನಿಕನೆಂದು ಹೇಳಿಕೊಂಡು ಸಂದೇಶ ಕಳುಹಿಸಿದ್ದ ರಂಜಿತ್‌ ಸಿಂಗ್ ಎಂಬಾತ 30 ಕೆ.ಜಿ ಮೈಸೂರು ಪಾಕ್‌ ಬೇಕೆಂದು ತಿಳಿಸಿದ್ದ. ಜ. 15ರಂದು ವಿಮಾನ ನಿಲ್ದಾಣದಲ್ಲಿ ಡೆಲಿವರಿ ನೀಡುವಂತೆ ಕೋರಿದ್ದ. ವಿಳಾಸ ಸಹ ಕಳುಹಿಸಿದ್ದ. ಕರೆ ಮಾಡಿಯೂ ಮಾತನಾಡಿದ್ದ.’ ‘ಮುಂಗಡವಾಗಿ ಹಣ ನೀಡು ವುದಾಗಿ ಹೇಳಿದ್ದ ರಂಜಿತ್, ಕ್ಯೂಆರ್‌ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ತಿಳಿಸಿದ್ದ. ಈತನ ನಡೆಯಿಂದ ಅನುಮಾನಗೊಂಡು ಸ್ಕ್ಯಾನ್ ಮಾಡಲಿಲ್ಲ. ₹ 1 ರೂಪಾಯಿ ಕಳುಹಿ ಸುವಂತೆ ಆತನಿಗೆ ಹೇಳಲಾಗಿತ್ತು. ಅಷ್ಟಕ್ಕೆ ಆತ, ಕರೆ ಕಡಿತಗೊಳಿಸಿದ’ ಎಂದು ಪ್ರಸಾದ್ ಬರೆದುಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸೈನಿಕರೊಬ್ಬರ ಫೋಟೊ ವನ್ನು ಈತ ತನ್ನ ವಾಟ್ಸ್‌ಆ್ಯಪ್‌ ಡಿ.ಪಿ ಆಗಿ ಹಾಕಿಕೊಂಡಿದ್ದ.ಈತ ನನ್ನ ಫೇಸ್‌ಬುಕ್ ಹಾಗೂ ಜಿ–ಮೇಲ್ ಖಾತೆಗಳನ್ನು ಹ್ಯಾಕ್ ಮಾಡಲು ಯತ್ನಿಸಿದ್ದ. ಅದಕ್ಕೂ ಮುನ್ನವೇ ನಾನು ಪಾಸ್‌ವರ್ಡ್ ಬದ ಲಾಯಿಸಿದೆ. ಆರೋಪಿಯ ವಂಚನೆ ಯತ್ನದ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT