ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಖಾಸಗಿ ವಿಡಿಯೊ ಚಿತ್ರೀಕರಿಸುತ್ತಿದ್ದ ವೃದ್ಧನ ಬಂಧನ

Last Updated 6 ಮಾರ್ಚ್ 2022, 2:22 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಖಾಸಗಿ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದಡಿ ನಾರಾಯಣಗೌಡ (60) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ನಾರಾಯಣಗೌಡ, ತನ್ನ ಅಕ್ಕ–ಪಕ್ಕದ ಮನೆಗಳ ಮಹಿಳೆಯರು ಹಾಗೂ ಯುವತಿಯರ ಖಾಸಗಿ ವಿಡಿಯೊ ಚಿತ್ರೀಕರಿಸುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಶಕ್ಕೆ ಪಡೆದು ಪರಿಶೀಲಿಸಿದಾಗ, ಆತನ ಮೊಬೈಲ್‌ನಲ್ಲಿ ಫೋಟೊ ಹಾಗೂ ವಿಡಿಯೊಗಳು ಪತ್ತೆಯಾದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಆರೋಪಿ, ಮಹಿಳೆಯರ ಖಾಸಗಿ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸುತ್ತಿದ್ದ. ವಿಡಿಯೊ ಸಹ ಚಿತ್ರೀಕರಿಸುತ್ತಿದ್ದನೆಂದು ಗೊತ್ತಾಗಿದೆ. ಮನೆಯೊಂದರಲ್ಲಿ ಇಣುಕಿ ನೋಡುತ್ತಿದ್ದಾಗಲೇ ಆತನನ್ನು ನಿವಾಸಿಯೊಬ್ಬರು ನೋಡಿ ಬೆನ್ನಟ್ಟಿದ್ದರು. ಆದರೆ, ಆರೋಪಿ ತಪ್ಪಿಸಿಕೊಂಡಿದ್ದ.’

‘ಆರೋಪಿ ವಾಸವಿದ್ದ ಪ್ರದೇಶದ ಹಲವು ಮಹಿಳೆಯರು, ಯುವತಿಯರ ಫೋಟೊ ಹಾಗೂ ವಿಡಿಯೊಗಳು ಮೊಬೈಲ್‌ನಲ್ಲಿವೆ. ಇದನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT