ಬೆಂಗಳೂರು: ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನ ಡಿಸೆಂಬರ್ 23ರಿಂದ 28ರವರೆಗೆ ನಡೆಯಲಿದೆ.

ಇಲ್ಲಿ ಸುಮಾರು 48 ವರ್ಷಗಳಿಂದ ಕಲಾ ತರಗತಿಗಳು ನಡೆಯುತ್ತಿದ್ದು, ಇಲ್ಲಿ ಅಧ್ಯಯನ ಮಾಡಿರುವ ಕಲಾವಿದರು 68 ವಿದ್ಯಾರ್ಥಿಗಳ ವಿಭಿನ್ನ ಶೈಲಿಯ ವಿನೂತನ ಕಲಾಕೃತಿಗಳ ಅನಾವರಣ ಈ ಕಲಾ ಪ್ರದರ್ಶನದಲ್ಲಿ ನಡೆಯಲಿದೆ.

ಕಲಾ ಶಿಕ್ಷಕರಾದ ಸಂಜಯ್ ಚಾಪೋಲ್ಕರ್ ರವರ ಮಾರ್ಗದರ್ಶನದಲ್ಲಿ ಕಲಾಕೃತಿಗಳ ಅನಾವರಣ ನಡೆಯುತ್ತಿದೆ. ನಾಡಿನ ಸಂಸ್ಕೃತಿ ಬಿಂಬಿಸುವ ಚಿತ್ರಗಳು, ಜನಪದ ಸಂಸ್ಕೃತಿಯ ಅನಾವರಣ, ನಿಸರ್ಗ ಚಿತ್ರಗಳ ದರ್ಶನ, ನಮ್ಮ ನಾಡಿನ ವಿವಿಧ ದೇಗುಲಗಳ ದರ್ಶನ, ಅಗೋಚರ ಮತ್ತು ವಿಸ್ಮಯಕಾರಿ ಸಂಗತಿಗಳ ಅನಾವರಣ, ಭಾವನಾತ್ಮಕ ಸಂದೇಶವಿರುವ ಚಿತ್ರ ದರ್ಶನ, ಹೀಗೆ ಹತ್ತ ಹಲವಾರು ಸಂಗತಿಗಳು ಅವರು ರಚಿಸಿರುವ ಕಲಾಕೃತಿಗಳಲ್ಲಿ ಅನಾವರಣಗೊಳ್ಳಲಿದೆ.

ತೈಲ ವರ್ಣ ಮತ್ತು ಜಲ ವರ್ಣ, ಅಕ್ರಾಲಿಕ್ ಮಾಧ್ಯಮ, ಚಾರ್ಕೋಲ್ ಪೇಂಟಿಂಗ್, ಪೆನ್ಸಿಲ್ ಸ್ಕೆಚ್ ಮುಂತಾದ ವಿಭಿನ್ನ ಮಾದರಿ ಶೈಲಿಯ ಕಲಾಕೃತಿಗಳನ್ನು ರಚಿಸಿದ್ದಾರೆ. ವಿಭಿನ್ನ ಸಂದೇಶಗಳನ್ನು ಈ ಕಲಾಕೃತಿಗಳು ಹೊತ್ತು ತರಲಿದೆ.

ಪ್ರದರ್ಶನ ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಬಸವನಗುಡಿ ಬೆಂಗಳೂರು

ದಿನ: ಡಿಸೆಂಬರ್ 23ರಿಂದ 28ರ ವರೆಗೆ

ಪ್ರದರ್ಶನದ ಸಮಯ : ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.