ಕನ್ನಡ ಸಾಹಿತ್ಯದ ಪ್ರಮುಖ ಕವಿಗಳು, ಸಾಹಿತಿಗಳ ಪ್ರಮುಖ ಕವಿತೆಗಳು ಮತ್ತು ಬರಹಗಳನ್ನು ಬ್ರೈಲ್ ಲಿಪಿಯಲ್ಲಿ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ರೂಪಿಸಬೇಕು. ಇದರಿಂದ ಅಂಧರಿಗೆ ಕನ್ನಡ ಸಾಹಿತ್ಯ ಪರಂಪರೆಯ ಪಕ್ಷಿ ನೋಟ ಪರಿಚಯವಾಗಲಿದೆ
ಬರಗೂರು ರಾಮಚಂದ್ರಪ್ಪ, ಸಾಹಿತಿ
ಸರ್ಕಾರವು ಅಂಧರ ದಂಡೇ ಆಗಿದೆ. ಆ ಅಂಧತ್ವಕ್ಕೆ ಶಸ್ತ್ರಚಿಕಿತ್ಸೆ ಮಾಡಿ, ಅಂಧ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು
ಎಲ್. ಹನುಮಂತಯ್ಯ, ಕವಿ
ಅಂಧರು ಸ್ವಾಭಿಮಾನದಿಂದ ಬದುಕುವ ತಂತ್ರಗಳನ್ನುರೂಪಿಸಿಕೊಂಡಿದ್ದಾರೆ. ಇದರಲ್ಲಿ ಬರೆವಣಿಗೆಯು ಒಂದಾಗಿದ್ದು, ಇತರರಿಗೆ ಸಮಾನವಾಗಿ ಕಾವ್ಯ, ಸಾಹಿತ್ಯವನ್ನು ರಚಿಸಿರುವುದು ವಿಶೇಷ ಸಂಗತಿಯಾಗಿದೆ
ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕನ್ನಡದ ಎಲ್ಲ ಪುಸ್ತಕಗಳನ್ನು ಬ್ರೈಲ್ ಲಿಪಿಗೆ ಪರಿವರ್ತಿಸಲು ಆಗುವುದಿಲ್ಲ. ಅದಕ್ಕಾಗಿ ಕನ್ನಡ ಓದುವ ಎಂಜಿನ್ ಅನ್ನು ಅಭಿವೃದ್ಧಿಪಡಿಸಬೇಕು